ಮಹತ್ವಾಕಾಂಕ್ಷಿ ಗಗನಯಾನಕ್ಕೆ ಬಳಸುವ ರಾಕೆಟ್ ಅನ್ನು ಇಸ್ರೊ ಭಾನುವಾರ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಈ ಮೂಲಕ ಗಗನಯಾನದ ಸಿದ್ಥತೆಗೆ ಆರಂಭದಲ್ಲೇ ಯಶಸ್ಸು ಲಭಿಸಿದೆ.
ಗಗನಯಾತ್ರಿಗಳನ್ನು ಬಾಹ್ಯಕಾಶಕ್ಕೆ ಕಳುಹಿಸುವ ಭಾರತದ ಚೊಚ್ಚಲ ಪ್ರಯತ್ನಕ್ಕೆ ಇಸ್ರೊ ಸಿದ್ಧತೆಗಳನ್ನು ಆರಂಭಿಸಿದ್ದು, ಈ ನಿಟ್ಟಿನಲ್ಲಿ ಕ್ಷಿಪಣಿ ಉಡಾವಣೆಗೆ ಬೇಕಾದ ರಾಕೆಟ್ ಪರೀಕ್ಷೆ ನಡೆಸಲಾಯಿತು.
ಭಾನುವಾರ ಮುಂಜಾನೆ 7.20ರ ಸುಮಾರಿಗೆ ಶ್ರೀಹರಿ ಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿ ಎಚ್ ಎಸ್ 200 ರಾಕೆಟ್ ಅನ್ನು ಪರೀಕ್ಷೆಗೊಳಪಡಿಸಲಾಯಿತು. ಇದರ ಯಶಸ್ವಿನಿಂದ ವಿಜ್ಞಾನಿಗಳಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿದಂತಾಗಿದೆ.
4000 ಕೆಜಿ ತೂಕದ ಸ್ಯಾಟಲೈಟ್ ಗಳನ್ನು ಹೊತ್ತ ರಾಕೆಟ್ ಗಗನಕ್ಕೆ ಚಿಮ್ಮಲು ಆರಂಭದಲ್ಲಿ ಭಾರೀ ಶಕ್ತಿಯ ರಾಕೆಟ್ ಬಳಕೆ ಮಾಡಲಾಗುತ್ತಿದ್ದು, ಇದು ಜಿಎಸ್ ಎಲ್ ವಿ ಇಂಜಿನ್ ಅನ್ನು ಒಂದೇ ಬಾರಿಗೆ ರಾಕೆಟ್ ಅನ್ನು ಗಗನಕ್ಕೆ ಚಿಮ್ಮಿಸುವ ಸಾಮರ್ಥ್ಯ ಹೊಂದಿದೆ.