ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಾಹ್ಯಾಕಾಶದಲ್ಲಿ ಹೊಸತೊಂದು ಇತಿಹಾಸ ನಿರ್ಮಾಣ ಮಾಡಿದೆ.
ಅಂತರಿಕ್ಷದಲ್ಲಿ ನಿರುಪಯುಕ್ತವಾಗಿದ್ದ ಉಪಗ್ರಹವನ್ನು ನಿಯಂತ್ರಿತ ವಿಧಾನದ ಮೂಲಕ ಭೂ ವಾತಾವರಣಕ್ಕೆ ತಂದು ಪೆಸಿಫಿಕ್ ಮಹಾಸಾಗರದಲ್ಲಿ ಯಾರಿಗೂ ತೊಂದರೇ ಆಗದ ರೀತಿ ಬೀಳಿಸಿ ಸಾಧನೆ ಮಾಡಿದೆ.
ವಾಸ್ತವದಲ್ಲಿ ಅಂತರಿಕ್ಷದಲ್ಲೇ ಉಪಗ್ರಹವನ್ನು ಉಡಾಯಿಸುವ ಸಾಮರ್ಥ್ಯ ಭಾರತಕ್ಕೆ ಇದೆ. ಆದರೆ ಹಾಗೆ ಮಾಡಿದಲ್ಲಿ ಉಪಗ್ರಹದ ಅವಶೇಷಗಳು ಭವಿಷ್ಯದಲ್ಲಿ ಜಗತ್ತಿಗೆ ಕಂಟಕವಾಗುವ ಸಾಧ್ಯತೆ ಇತ್ತು. ಹೀಗಾಗಿ ಅವಧಿ ಮೀರಿದ ಒಂದು ಉಪಗ್ರಹವನ್ನು ಪೂರ್ಣ ಪ್ರಮಾಣದ ನಿಯಂತ್ರಿತ ವಿಧಾನದ ಮೂಲಕ ಸಮುದ್ರಕ್ಕೆ ಬೀಳುವಂತೆ ಮಾಡುವ ಸವಾಲಿನ ಕೆಲಸಕ್ಕೆ ಇಸ್ರೋ ಮುಂದಾಗಿತ್ತು.
ಮಂಗಳವಾರ ಸಂಜೆ 4:30ಕ್ಕೆ ಶುರುವಾದ ಪ್ರಕ್ರಿಯೆ ಸಂಜೆ 7:30ರವರೆಗೆ ನಡೆಯಿತು. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದ ಈ ಆಪರೇಷನ್ ಕೊನೆಗೂ ಯಶಸ್ವಿಯಾಗಿದೆ. ನಿರ್ದೇಶಿತ ಮಾರ್ಗದಲ್ಲೇ ಭೂವಾತಾವರಣ ತಲುಪಿದ ಉಪಗ್ರಹ ನಿರ್ದೇಶಿತ ಪ್ರದೇಶದಲ್ಲೇ ಪತನವಾಗಿದೆ ಎಂದು ಇಸ್ರೋ ತಿಳಿಸಿದೆ.