ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇವತ್ತು ಹೊಸ ದಾಖಲೆ ಬರೆದಿದೆ. ಒಂದೇ ರಾಕೆಟ್`ನಲ್ಲಿ 194 ಉಪಗ್ರಹಗಳನ್ನ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಬೆಳಗ್ಗೆ 9.28ರ ಸುಮಾರಿಗೆ ಶ್ರೀಹರಿಕೋಟಾದ ಡ್ಡಯನ ಕೇಂದ್ರದಿಂದ ಉಪಗ್ರಹಗಳ ಉಡಾವಣೆ ಮಾಡಲಾಯಿತು. ಬಳಿಕ ಉಪಗ್ರಹಗಳು ಸುರಕ್ಷಿತವಾಗಿ ಕಕ್ಷೆ ಸೇರಿವೆ ಎಂದು ಇಸ್ರೋ ತಿಳಿಸಿದೆ.
ಇದುವರೆಗಿನ ಇತಿಹಾಸದಲ್ಲಿ 100 ಉಪಗ್ರಹಗಳನ್ನ ಒಂದೇ ರಾಕೆಟ್`ನಲ್ಲಿ ಉಡಾಯಿಸಿದ ಉದಾಹರಣೆಗಳಿಲ್ಲ. ಹೀಗಾಗಿ, ಇದೊಂದು ಇಸ್ರೋದ ಹೊಸಮೈಲುಗಲ್ಲಾಗಿದೆ. ಈ ಹಿಂದೆ 22 ಉಪಗ್ರಹಗಳನ್ನಷ್ಟೇ ಉಡಾಯಿಸಿದ್ದ ಭಾರತ ಮೂಲಕ ಹೊಸ ದಾಖಲೆ ಬರೆದಿದೆ. ಇದರಲ್ಲಿ 100 ಉಪಗ್ರಹಗಳು ಅಮೆರಿಕ, ಜರ್ಮನಿ, ಇಸ್ರೇಲ್ ಮುಂತಾದ ರಾಷ್ಟ್ರಗಳ ವಾಣಿಜ್ಯ ಉದ್ದೇಶಿತ ಉಪಗ್ರಹಗಳಾಗಿವೆ. ಉಳಿದವು ಮಾತ್ರ ಭಾರತಕ್ಕೆ ಸೇರಿದದವುಗಳಾಗಿವೆ.