Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತೆರಿಗೆ ವಿನಾಯ್ತಿ ಕೇಂದ್ರ ಸರ್ಕಾರ ಕೈಬಿಡುತ್ತಾ ?

ತೆರಿಗೆ ವಿನಾಯ್ತಿ ಕೇಂದ್ರ ಸರ್ಕಾರ ಕೈಬಿಡುತ್ತಾ ?
ನವದೆಹಲಿ , ಮಂಗಳವಾರ, 16 ಆಗಸ್ಟ್ 2022 (08:29 IST)
ನವದೆಹಲಿ : ತೆರಿಗೆ ವಿನಾಯ್ತಿಗಳನ್ನು ಕೈಬಿಟ್ಟು, ವಿನಾಯ್ತಿ ಮುಕ್ತ ತೆರಿಗೆ ಪದ್ಧತಿ ಜಾರಿಗೊಳಿಸಲು ಹಾಗೂ ವಿನಾಯ್ತಿ ಬೇಡ ಎಂದವರಿಗೆ ಆದಾಯ ತೆರಿಗೆ ದರವನ್ನು ಕಡಿಮೆಮಾಡಲು ಕೇಂದ್ರ ವಿತ್ತ ಸಚಿವಾಲಯ ಹೊಸ ಪ್ರಸ್ತಾವ ಇರಿಸಿದೆ.

ಈ ಮೂಲಕ ಗೊಂದಲಮುಕ್ತ ಹಾಗೂ ಆಕರ್ಷಕ ಆದಾಯ ತೆರಿಗೆ ಪದ್ಧತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

2020-21ರಲ್ಲಿ ಈ ನಿಟ್ಟಿನಲ್ಲಿ ಹೊಸ ತೆರಿಗೆ ಪದ್ಧತಿಯೊಂದನ್ನು ಕೇಂದ್ರ ಜಾರಿಗೆ ತಂದಿತ್ತು. ಅದರಲ್ಲಿ ಮೊದಲ ವಿಧಾನದಲ್ಲಿ ಹಲವಾರು ತೆರಿಗೆ ವಿನಾಯ್ತಿ ಇರುತ್ತಿದ್ದವು. 2ನೇ ವಿಧಾನದಲ್ಲಿ ಯಾವುದೇ ತೆರಿಗೆ ವಿನಾಯ್ತಿ ಇರುತ್ತಿರಲಿಲ್ಲ.

ಆದರೆ ಮೊದಲನೆಯ ವಿಧಕ್ಕೆ ಹೋಲಿಸಿದರೆ ಈ ವಿಧದಲ್ಲಿ ಕಡಿಮೆ ಪ್ರಮಾಣದ ತೆರಿಗೆ ಇತ್ತು. ತೆರಿಗೆದಾರರು ತಮಗೆ ಇಷ್ಟವಾದ ವಿಧಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಈಗ ಗೊಂದಲ ತೊಡೆದುಹಾಕುವ ನಿಟ್ಟಿನಲ್ಲಿ ವಿನಾಯ್ತಿ ಮುಕ್ತ ತೆರಿಗೆ ಪದ್ಧತಿಗೆ ಸರ್ಕಾರ ಮುಂದಾಗಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಮತ್ತೆ ವಾಯು ಮಾಲಿನ್ಯ ಪ್ರಮಾಣ ಏರಿಕೆ!