Webdunia - Bharat's app for daily news and videos

Install App

ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿ ಆಗ್ತಾ ಇದ್ಯಾ ಭರತಖಂಡ....?

geetha
ಸೋಮವಾರ, 12 ಫೆಬ್ರವರಿ 2024 (21:09 IST)
ಮಥುರಾ ವಿವಾದ
ಮಥುರಾ-ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಟಾಪನೆ ಆದ ಬಳಿಕ ಮಥುರಾದಲ್ಲೂ ಶ್ರೀ ಕೃಷ್ಣನು ಕೂಡ ಸ್ವಸ್ಥಾನಕ್ಕೆ ಮರಳುವ ಸಾಧ್ಯತೆಗಳು ಕಣ್ಣ ಮುಂದೆ ಬರ್ತಾ ಇವೆ.. ಐತಿಹಾಸಿಕವಾದ ಕ್ಷಣಕ್ಕೆ ಮಥುರಾವೂ ಸಾಕ್ಷಿ ಆಗುವ ಭರವಸೆ ಸಿಕ್ತಾ ಇದೆ. ಭಾರತೀಯ ಪುರಾತತ್ವ ಇಲಾಖೆಯೂ ಕೊಟ್ಟ ಉತ್ತರದಿಂದ ಶಾಹಿ ಈದ್ಗಾ ಮಸೀದಿಯೂ ಮೂಲತಃ ಕೃಷ್ಣನದ್ದೇ ಅನ್ನುವ ಖಚಿತ ಹಿಂಟ್ ಸಿಕ್ತಾ ಅನ್ನೋದೆ ಸದ್ಯದ ಪ್ರಶ್ನೆ.ದೇಶದಲ್ಲಿ ಹಲವು ಐತಿಹಾಸಿಕವಾದ ಧಾರ್ಮಿಕ ಕ್ಷಣಗಳು ಇಡೀ ಜಗತ್ತಿನ ಕೇಂದ್ರಬಿAದುವಾಗ್ತಾ ಇವೆ. ಒಂದು ಕಡೆ ಅಯೋಧ್ಯೆಯಲ್ಲಿ ೫೦೦ವರ್ಷಗಳ ತ್ಯಾಗ, ಬಲಿದಾನ, ಹೋರಾಟಗಳ ಬಳಿಕ ಐತಿಹಾಸಿಕ ರಾಮನ ಮಂದಿರ ಲೋಕಾರ್ಪಪಣೆ ಆಗಿದೆ.

ಭರತಖಂಡವೂ ಐತಿಹಾಸಿಕವಾದ ಹಿಂದೂಪರAಪರೆಯ ಅಸ್ತಿತ್ವಕ್ಕೆ ನಾಂದಿ ಹಾಡುವ ಕಾಲ ಬಹುತೇಕ ಕೂಡಿ ಬಂದAತಿದೆ. ರಾಮಮಂದಿರವೂ ಅಯೋಧ್ಯೆಯಲ್ಲಿ ತಲೆಎತ್ತಿ ನಿಂತ ಬಳಿಕ ಇದೀಗ ಮತ್ತೊಂದು ಭವ್ಯವಾದ ಕ್ಷಣ ಬಂದೇ ಬಿಡಬಹುದು ಅನ್ನುವ ಹಿಂಟ್ ಸಿಕ್ತಾ ಇದೆ.ಭಾರತವೂ ಹಲವು ಧರ್ಮಗಳ ನೆಲೆಬೀಡ ಆದರೂ ಬಹುಸಂಖ್ಯಾತರು ಹಿಂದೂಗಳ ಭರತಖಂಡದಲ್ಲಿ ಧಾರ್ಮಿಕ ವಿಚಾರಗಳ ಅಸ್ತಿತ್ವಕ್ಕಾಗಿ ಹೋರಾಟ ನಡೆಯುತ್ತಾ ಬಂದಿದೆ.ಅದೇನೆ ಇರಲೀ ಇತ್ತಿಚ್ಚೇಗೆ ಕಾಶಿ ಬಳಿಕ ಇತ್ತಾ ಮಥುರಾ ವಿವಾದವೂ ಮತ್ತೆ ಮುನ್ನಲೆಗೆ ಬಂದು ಬಿಟ್ಟಿದೆ.

ದೀಗ ಭಾರತೀಯ ಪುರಾತತ್ವ ಇಲಾಖೆ ಐತಿಹಾಸಿಕವಾದ ಸತ್ಯವನ್ನಾ ಅನಾವರಣಗೊಳಿಸಿತಾ ಅನ್ನುವ ಚರ್ಚೆ ಬಲು ಜೋರಾಗಿಯೇ ಎದ್ದಿದೆ. ಅದೇ ಮಥುರಾ ವಿವಾದದ ಕುರಿತು ೧೯೯೨ರಲ್ಲಿ ಬಾಬ್ರಿ ಮಸೀದಿ ಕೆಡವಿದ ಬಳಿಕ ಇಲ್ಲೊಂದು ಭವ್ಯವಾದ ರಾಮಮಂದಿರ ನಿರ್ಮಾಣ ಆಗಲೇಬೇಕು ಅನ್ನುವ ಕೂಗು ಜೋರಾಗಿತ್ತು... ಆದರೂ ಇದಕ್ಕೂ ಮೊದಲಿನಿಂದಲೂ ಮಂದಿರದ ಹೋರಾಟಕ್ಕೆ ನಡೆದ ಚಳುವಳಿಗಳು ಒಂದಾ ಎರಡಾ ಹೇಳಿ. ಬರೋಬ್ಬರಿ ೫೦೦ವರ್ಷಗಳ ರಾಮನ ಮಂದಿರದ ಅಸ್ತಿತ್ವಕ್ಕಾಗಿ ನಡೆದ ಅವಿರತವಾದ ರಾಮ ಸಂಕಲ್ಪ ಹೋರಾಟ ೨೦೨೪ರಲ್ಲಿ ನೇರವೇರಿದೆ.

ಆದರೆ ಈಗ ಮತ್ತೊಂದು ಹಿಂದೂಗಳ ಅಸ್ಮಿತೆಗಾಗಿ ಹೊಸ ಆಶಾಭಾವನೆ ಮೂಡ್ತಿದೆ. ಅದು ಮಥುರಾದಲ್ಲಿ ಮೊದಲು ಇದ್ದದ್ದು ಕೃಷ್ಣನ ದೇಗುಲವೇ ಹೊರತು ಮಸೀದಿ ಅಲ್ಲ ಅನ್ನುವ ಮಾಹಿತಿಯೂ ಹೊರ ಬಿದ್ದ ಬಳಿಕ ಮಥುರಾದಲ್ಲಿ ಕೃಷ್ಣನ ದೇಗುಲವನ್ನು ಈ ಹಿಂದೆ ಕೆಡವಿದ್ದು ಸತ್ಯ, ಆ ಬಳಿಕವೇ ಇಲ್ಲೊಂದು ಮಸೀದಿ ನಿರ್ಮಾಣವಾಗಿದೆ ಅಂತ ಭಾರತೀಯ ಪುರಾತತ್ವ ಇಲಾಖೆ ಮಾಹಿತಿಯನ್ನು ನೀಡಿದ್ದಾಗಿದೆ.

ಈ ಕುರಿತಾಗಿ ಭಾರತೀಯ ಪುರಾತತ್ವ ಇಲಾಖೆಯೂ ಸ್ಫೊಟಕವಾದ ಸತ್ಯವನ್ನು ಬಹಿರಂಗಪಡಿಸಿತ್ತು. ಪುರಾತತ್ವ ಇಲಾಖೆಯ ಪ್ರಕಾರ ೧೬೭೦ರಲ್ಲಿ ಕೇಶವದೇವ ದೇಗುಲವನ್ನು ನೆಲಸಮ ಮಾಡಿಯೇ ಅಲ್ಲೊಂದು ಶಾಹಿ ಈದ್ಗಾ ಮೈದಾನ ಎಲೆ ಎತ್ತಿದೆ ಎನ್ನಲಾಗ್ತಿದೆ.ಮಥುರಾದಲ್ಲಿ ಇದೀಗ ಶಾಹಿ ಈದ್ಗಾ ಮಸೀದಿ ಇರುವ ಜಾಗ ಶ್ರೀ ಕೃಷ್ಣನಿಗೆ ಸೇರಿದ್ದು ಅನ್ನೋದು ಭಾರತೀಯ ಪುರಾತತ್ವ ಇಲಾಖೆಯ ಖಡಕ್ ಉತ್ತರ... ಅಲ್ಲದೇ ಐದು ಸಾವಿರ ವರ್ಷಗಳ ಹಿಂದೆಯೇ ಮಥುರಾದಲ್ಲಿ ಕೇಶವದೇವ ದೇಗುಲವನ್ನು ನಿರ್ಮಿಸಲಾಗಿತ್ತು ಅನ್ನೋದನ್ನ ಕೂಡ ಇತಿಹಾಸ ಹೇಳ್ತಿದೆ.

ಘಟಿಸಿ ಹೋದ ಇತಿಹಾಸದ ಧಾರ್ಮಿಕ ಘಟನೆಗಳ ಬಗ್ಗೆ ಮಾತಾನಾಡೋದಕ್ಕೆ ಅಗತ್ಯವಾದ ಉತ್ಖನನದ ಸಮಗ್ರ ಮಾಹಿತಿ ಬೇಕಾಗುತ್ತೆ ಆದರೆ ಕೆಲವು ದಿನಗಳ ಹಿಂದಷ್ಟೇ ಭಾರತೀಯ ಪುರಾತತ್ವ ಇಲಾಖೆ ಕೊಟ್ಟಿರುವ ಇನ್‌ಪಾರ್ಮಮೇಶನ್ ಪ್ರಕಾರ ಮಸೀದಿಯನ್ನು ಕಟ್ಟಿರೋದು ಈ ಹಿಂದೆ ಇದ್ದ ಕೇಶವದೇಗುಲವನ್ನು ಧರಾಶಾಹಿ ಮಾಡಿಯೇ ಅಂತೆ ಮಥುರಾದ ಕೇಶವದೇವ ದೇವಾಲಯವನ್ನು ಸುಮಾರು ಐದು ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಅಂತ ಹೇಳಲಾಗ್ತಾ ಇದೆ ಹಾಗೇ ನೋಡಿದರೇ ಮಥುರಾ ಶ್ರೀಕೃಷ್ಣನ ಜನ್ಮಸ್ಥಳ. ಆದರೆ ಬೆಳೆದಿದ್ದು ಮಾತ್ರ ದ್ವಾರಕ ಅದೇನೇ ಇರಲಿ ಶ್ರೀಕೃಷ್ಣನ ಮೊಮ್ಮಕ್ಕಳು ಮಥುರಾದಲ್ಲಿ ಕೇಶದೇವ ದೇವಾಲಯವನ್ನು ನಿರ್ಮಿಸಿದ್ದಾರೆ ಅನ್ನುವ ಕಥೆ ಇದೆ.

ಮಥುರಾದಲ್ಲಿ ಒಳ್ಳೆಯ ಐತಿಹಾಸಿಕ ಕ್ಷಣ ಬರುವ ಎಲ್ಲಾ ಸಾಧ್ಯತೆ ಇದೆ ಆದರೂ ೧೬೭೦ರಲ್ಲಿ ಮಥುರಾದಲ್ಲಿ ನಡೆದು ಹೋಗಿದೆ ಎನ್ನಲಾಗ್ತಾ ಇರುವ ಕೇಶವದೇವ ದೇಗುಲ ಧ್ವಂಸ ಪ್ರಕರಣಕ್ಕೆ ಕೆಲವು ದಿನಗಳ ಹಿಂದೆ ಪುರಾತತ್ವ ಇಲಾಖೆ ಕೊಟ್ಟಿರುವ ಹಿಂಟ್ ಹೊಸ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳುವ ಭರವಸೆಯನ್ನು ಹುಟ್ಟು ಹಾಕಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments