ಇಂಡೋ-ಬಾಂಗ್ಲಾದೇಶ ಗಡಿಗೆ ಬೇಲಿ ಹಾಕುವ ಕಾರ್ಯ ಮುಂಬರುವ ಡಿಸೆಂಬರ್ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು ಕೇಂದ್ರ ಕಾನೂನು ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಸುಮಾರು 65 ವರ್ಷಗಳ ನಂತರ ಇಂಡೋ-ಬಾಂಗ್ಲಾ ಗಡಿಗೆ ಬೇಲಿ ಹಾಕುವ ಕಾರ್ಯ ಆರಂಭವಾಗಿದೆ ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಎರಡು ವರ್ಷಗಳು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ ಸಬೆಯಲ್ಲಿ ಮಾತನಾಡುತ್ತಿದ್ದರು.
ಬಾಂಗ್ಲಾದೇಶದ ವಲಸಿಗರು ದೇಶದೊಳಗೆ ನುಸುಳುವುದನ್ನು ಶೀಘ್ರದಲ್ಲಿಯೇ ತಡೆಯಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದ ಸುರಕ್ಷತೆ ಮತ್ತು ಭದ್ರತೆ ಕೇಂದ್ರ ಸರಕಾರದ ಪ್ರಥಮ ಆದ್ಯತೆಯಾಗಿದೆ. ಚೀನಾ, ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ಗಡಿಗಳಿಗೆ ಬೇಲಿ ಹಾಕುವ ಕುರಿತಂತೆ ಪ್ರಧಾನಿ ಮೋದಿ ಸ್ಪಷ್ಟ ನಿಲುವು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಉತ್ತಮ ಅಡಳಿತ ಮತ್ತು ಅಭಿವೃದ್ಧಿ ಎರಡು ವಿಷಯಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ. ಕಳೆದೆರಡು ವರ್ಷಗಳಿಂದ ಸಚಿವರು ಯಾವುದೇ ಭ್ರಷ್ಟಾಚಾರ, ಹಗರಣದಂತಹ ಆರೋಪಗಳಲ್ಲಿ ಸಿಲುಕಿಲ್ಲ ಎಂದು ಕೇಂದ್ರ ಕಾನೂನು ಖಾತೆ ಸಚಿವ ಸದಾನಂದಗೌಡ ಸಂತಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.