ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ನಿವೃತ್ತಿಗೊಂಡ ಸೋನಿಯಾ ಗಾಂಧಿ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪುತ್ರನಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ್ದಾರೆ.
ರಾಜೀವ್ ರನ್ನು ಮದುವೆಯಾಗಿ ಭಾರತಕ್ಕೆ ಬಂದಾಗ ನನಗೆ ರಾಜಕೀಯದ ಪರಿಚಯವಿರಲಿಲ್ಲ. ಆದರೆ ಅತ್ತೆ ಇಂದಿರಾ ಮಗಳಂತೆ ನೋಡಿದರು. ಭಾರತದ ಸಂಸ್ಕೃತಿ ಕಲಿಸಿದರು. ಅವರ ಹತ್ಯೆಯಾದಾಗ ಅಮ್ಮನನ್ನು ಕಳೆದುಕೊಂಡ ಹಾಗಾಗಿತ್ತು. ಆ ಸಂದರ್ಭದಲ್ಲಿ ಗಂಡ, ಮಕ್ಕಳನ್ನು ರಾಜಕೀಯದಿಂದ ದೂರವಿಡಲು ಯತ್ನಿಸಿದ್ದೆ. ಮುಂದೆ ಅಧ್ಯಕ್ಷೆಯಾದಾಗಲೂ ಹೆದರಿಕೆಯಾಗಿತ್ತು ಎಂದರು.
ನಂತರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವು ಈಗ ಅಧಿಕಾರ ಕಳೆದುಕೊಂಡಿರಬಹುದು. ಆದರೆ ಇದಕ್ಕೆಲ್ಲಾ ಹೆದರುವವರಲ್ಲ ಎಂದರು. ಸೋನಿಯಾ ಭಾಷಣ ಆರಂಭಿಸುವಾಗ ಕೆಲ ಕಾಲ ಪಟಾಕಿ ಸದ್ದು ಜೋರಾಗಿದ್ದರಿಂದ ಕೆಲವು ಕ್ಷಣ ಭಾಷಣ ನಿಲ್ಲಿಸಬೇಕಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ