ಟೊರಾಂಟೊ: ಭಾರತೀಯ ಮೂಲದ ಸಿಖ್ ಮಹಿಳೆ ಫಲ್ಬಿಂದರ್ ಕೌರ್ ಶೆರ್ಗಿಲ್ ಕೆನಡಾ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಲ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಕೆನಡಾದಲ್ಲಿ ಶೆರ್ಗಿಲ್ ಆಂಡ್ ಕಂಪನಿಯ ಏಕಮೇವ ಪ್ರ್ಯಾಕ್ಟಿಷನರ್ ಆಗಿರುವ ಪಲ್ಬಿಂದರ್ ಕೌರ್ ಸುಪ್ರೀಂ ಕೋರ್ಟ್ ಸೇರಿದಂತೆ ಹಲವು ನ್ಯಾಯಾಲಯಗಳಲ್ಲಿ ಹಾಗೂ ಟ್ರಿನ್ಯೂನಲ್ ಗಲಲ್ಲಿ ಅಪಾರ ಅನುಭವಹೊಂದಿದ್ದಾರೆ. ಪಲ್ಬಿಂದರ್ ಸ್ಕೌರ್ ಶೆರ್ಗಿಲ್ ನೇಮಕವನ್ನು ಜಾಗತಿಕ ಸಿಖ್ ಸಂಘಟನೆ ಸ್ವಾಗತಿಸಿದೆ.
ನಾವಿಂದು ಕೆನಡಾ ನ್ಯಾಯಾಂಗದ ಉನ್ನತ ಹುದ್ದೆಯಲ್ಲಿ ಮೊದಲಬಾರಿಗೆ ರುಮಾಲು ಸುತ್ತಿದ(ಟರ್ಬನ್ಡ್) ಸಿಖ್ ಮಹಿಳೆಯನ್ನು ನೋಡುತ್ತಿದ್ದೇವೆ. ಇದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಜಾಗತಿಕ ಸಿಖ್ ಸಮುದಾಯದ ಅಧ್ಯಕ್ಷ ಮುಖಭೀರ್ ಸಿಂಗ್ ಶ್ಲಾಘಿಸಿದ್ದಾರೆ.
ಕೆನಡಾದ ಅಟಾರ್ನಿ ಜನರಲ್ ಹಾಗೂ ಕಾನೂನು ಸಚಿವರಾದ ವಿಲ್ಸನ್-ರೆಬೌಲ್ಡ್ ಅವರು ಶೆರ್ಗಿಲ್ ಅವರನ್ನು ನೇಮಕಮಾಡಿದ್ದಾರೆ. 1991ರಿಂದ ಜಾಗತಿಕ ಸಿಖ್ ಸಂಘಟನೆಯ ಸಾಮಾನ್ಯ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಶೆರ್ಗಿಲ್ ಕೆನಡಾದಲ್ಲಿ ಮಾನವ ಹಕ್ಕುಗಳು ಹಾಗೂ ಧಾರ್ಮಿಕ ಹೊಂದಾಣಿಕೆ ಕಾನೂನಿಗೆ ಸ್ಪಷ್ಟ ರೂಪುರೇಷೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.