Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಲಬಾರ್ 2017 ರಲ್ಲಿ ಭಾಗವಹಿಸಲಿರುವ ಭಾರತ, ಜಪಾನ್, ಅಮೆರಿಕ ನೌಕಾಪಡೆಗಳು

ಮಲಬಾರ್ 2017 ರಲ್ಲಿ ಭಾಗವಹಿಸಲಿರುವ ಭಾರತ, ಜಪಾನ್, ಅಮೆರಿಕ ನೌಕಾಪಡೆಗಳು
ನವದೆಹಲಿ , ಗುರುವಾರ, 15 ಜೂನ್ 2017 (18:16 IST)
ಭಾರತ, ಜಪಾನ್ ಮತ್ತು ಅಮೆರಿಕದ ನೌಕಾ ಹಡಗುಗಳು, ಯುದ್ಧ ವಿಮಾನಗಳು ಮತ್ತು ಭಾರತೀಯ ಸೇನಾ ಸಿಬ್ಬಂದಿ ಮಲಬಾರ್ 2017 ರ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿವೆ.
 
ಕಳೆದ ಕೆಲ ವರ್ಷಗಳಿಂದ ಇಂಡೋ-ಏಶಿಯಾ ಪೆಸಿಫಿಕ್‌ನಲ್ಲಿನ ಕಡಲ ಭದ್ರತೆಗೆ ಸಂಬಂಧಿಸಿದ ಬೆದರಿಕೆಗಳ ಬಗೆಗಿನ ಮಾಹಿತಿ ನೀಡಲು ಮಲಬಾರ್ 2017 ಆಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.  
 
ಭಾರತದ ಪೂರ್ವ ಕರಾವಳಿಯ ಬಂಗಾಳ ಕೊಲ್ಲಿಯಲ್ಲಿ ಮತ್ತು ಕಡಲತೀರದಲ್ಲಿ ಸೇನಾ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ತರಬೇತಿಯಲ್ಲಿ ಉನ್ನತ ಮಟ್ಟದ ಯುದ್ಧನೌಕೆ ಕೌಶಲ್ಯಗಳು, ವಿಷಯ ತಜ್ಞ ಮತ್ತು ವೃತ್ತಿಪರ ವಿನಿಮಯ ಕೇಂದ್ರಗಳು, ಸಂಯೋಜಿತ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಕಾರ್ಯಾಚರಣೆಗಳು, ನೌಕಾ ಗಸ್ತು ಮತ್ತು ವಿಚಕ್ಷಣ ಕಾರ್ಯಾಚರಣೆಗಳು, ಮೇಲ್ಮೈ ಮತ್ತು ಜಲಾಂತರ್ಗಾಮಿ ಯುದ್ಧ, ವೈದ್ಯಕೀಯ ಕಾರ್ಯಾಚರಣೆಗಳು, ಹಾನಿ ನಿಯಂತ್ರಣ, ವಿಶೇಷ ಪಡೆಗಳು, ಸ್ಫೋಟಕ ಆರ್ಡಿನೆಸ್ ವಿಲೇವಾರಿ (EOD ), ಹೆಲಿಕಾಪ್ಟರ್ ಕಾರ್ಯಾಚರಣೆಗಳು, ಮತ್ತು ಬೋರ್ಡ್ ಹುಡುಕಾಟ ಮತ್ತು ಗ್ರಹಣ (VBSS) ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲಾಗುತ್ತದೆ.
 
ಭಾರತೀಯ-ಜಪಾನೀಸ್ ಮತ್ತು ಯು.ಎಸ್. ಕಡಲ ಪಡೆಗಳು ಇಂಡೋ-ಏಶಿಯಾ ಪೆಸಿಫಿಕ್ ಪ್ರದೇಶದಲ್ಲಿ ಸಮಗ್ರವಾಗಿ ಭದ್ರತೆ ಮತ್ತು ಸ್ಥಿರತೆಯನ್ನು ಒದಗಿಸಿ ವೃತ್ತಿಪರತೆ ಹೆಚ್ಚಿಸಲು ಮತ್ತೆ ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತವೆ. ಮೂರು ನೌಕಾಪಡೆಗಳ ನಡುವಿನ ಪರಸ್ಪರ ಕಾರ್ಯನಿರ್ವಹಣೆಯ ನಡುವಿನ ತಿಳುವಳಿಕೆ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
 
ಮಲಬಾರ್ 2017ರಲ್ಲಿ ಪಾಲ್ಗೊಳ್ಳಲು ಬಯಸುವ ಭಾರತೀಯ ಸೇನಾಪಡೆ ಸಿಬ್ಬಂದಿಯ ಪಟ್ಟಿಗಾಗಿ ಭಾರತೀಯ ನೌಕಾಪಡೆ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದು. ಜಪಾನ್ ಸೇನಾ ಸಿಬ್ಬಂದಿಗಳ ಪಟ್ಟಿಗಾಗಿ ಜಪಾನ್ ನೌಕಾಪಡೆ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
 
ಮಲಬಾರ್‌ 2017ರಲ್ಲಿ ಪಾಲ್ಗೊಳ್ಳುವ ಅಮೆರಿಕದ ನೌಕಾಪಡೆ ಸಿಬ್ಬಂದಿ ಮಾಹಿತಿಗಾಗಿ ಸಾರ್ವಜನಿಕ ವ್ಯವಹಾರಗಳು ಸಿಟಿಎಫ್‌ 70 ಲೆಫ್ಟಿನೆಂಟ್ ಕಮಾಂಡರ್ ಆರೋನ್ ಕಾಕಿಯೆಲ್‌ರನ್ನು ಸಂಪರ್ಕಿಸಬಹುದಾಗಿದೆ ಇಲ್ಲವೇ ಟೋಲ್ ಫ್ರೀ ಸಂಖ್ಯೆ 1-808-653-2093 ಕರೆ ಮಾಡಬಹುದಾಗಿದೆ. ಅಥವಾ ಇ-ಮೇಲ್‌ aaron.kakiel@ctf70.navy.mil ಮೂಲಕ ಮಾಹಿತಿ ಪಡೆಯಬಹುದಾಗಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ವಿಷ್ಣುವಿನ 11ನೇ ಅವತಾರವಂತೆ..