ಉತ್ತರ ಕಾಶ್ಮಿರದ ಉರಿ ಪಟ್ಟಣದ ಸೇನಾ ಕಚೇರಿಗೆ ನುಗ್ಗಿದ್ದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ, ಗಡಿ ದಾಟಿ ಪಿಓಕೆಗೆ ನುಗ್ಗಿ ಮೂರು ತರಬೇತಿ ಶಿಬಿರಗಳಲ್ಲಿದ್ದ 20 ಉಗ್ರರನ್ನು ಹತ್ಯೆಗೈದು ಸೇಡು ತೀರಿಸಿಕೊಂಡಿದೆ.
ಭಾರತೀಯ ಸೇನಾಪಡೆಯ 18 ರಿಂದ 20 ಸೈನಿಕರಿರುವ ಎರಡು ತುಕುಡಿಗಳು, ಉರಿ ಸೇನಾ ಕಚೇರಿಯಿಂದ ಮಿಲಿಟರಿ ಹೆಲಿಕಾಪ್ಟರ್‌ಗಳ ಮೂಲಕ ಗಡಿದಾಟಿ ಪಿಓಕೆಗೆ ನುಗ್ಗಿವೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಸೇನಾಪಡೆಗಳಾಗಲಿ ಅಥವಾ ರಕ್ಷಣಾ ಇಲಾಖೆಯಾಗಲಿ ಘಟನೆಯನ್ನು ಖಚಿತಪಡಿಸಿಲ್ಲ. ಅಥವಾ ನಿರಾಕರಿಸಿಯೂ ಇಲ್ಲ ಎನ್ನಲಾಗಿದೆ.
ಉರಿ ಉಗ್ರರ ದಾಳಿಯ ಎರಡು ದಿನಗಳ ನಂತರ ಸೆಪ್ಟೆಂಬರ್ 20 ಮತ್ತು ಸೆಪ್ಟೆಂಬರ್ 21 ರ ಮಧ್ಯರಾತ್ರಿ, ಪಿಓಕೆಗೆ ನುಗ್ಗಿದ ಸೇನಾಪಡೆ 20 ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿದ್ದಲ್ಲದೇ 200ಕ್ಕೂ ಹೆಚ್ಚು ಜನರನ್ನು ಗಂಭೀರವಾಗಿ ಗಾಯಗೊಳಿಸಿದೆ ಎನ್ನಲಾಗಿದೆ.
ಪಾಕ್ ಆಕ್ರಮಿತ ಕಾಶ್ಮಿರದ ಮೇಲೆ ಭಾರತ ದಾಳಿ ಮಾಡಬಹುದು ಎನ್ನುವ ಭೀತಿಯಿಂದಾಗಿ ಪಾಕಿಸ್ತಾನದ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಉತ್ತರ ಪಾಕಿಸ್ತಾನದ ನಗರಗಳಿಗೆ ಹಾರಾಟ ನಿಲ್ಲಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ