ಆಂಧ್ರಪ್ರದೇಶದ ಏಲೂರು ಮೂಲದ ವೈದ್ಯರನ್ನು ಲಿಬಿಯಾದಲ್ಲಿ ಐಸಿಸ್ ಅಪಹರಿಸಿ ಈಗ ಬಿಡುಗಡೆ ಮಾಡಿದೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಐಸಿಸ್ ಒತ್ತೆಯಾಳಾಗಿದ್ದ ಡಾ.ರಾಮಮೂರ್ತಿ ಕೋಸನಮ್ ಅವನ್ನು ಬಿಡುಗಡೆಗೊಳಿಸಿದ್ದೇವೆ. ಅವರಿಗೆ ಗುಂಡು ತಗುಲಿದ ಗಾಯವಾಗಿದ್ದು, ಶೀಘ್ರದಲ್ಲೇ ಸ್ವದೇಶಕ್ಕೆ ಕರೆತರುತ್ತೇವೆ ಎಂದಿದ್ದಾರೆ.
ರಾಮಮೂರ್ತಿ ಜತೆಗೆ ಇನ್ನಿತರೆ ಐದು ಮಂದಿ ಭಾರತೀಯರನ್ನು ಒತ್ತೆಯಿಂದ ಬಿಡುಗಡೆ ಮಾಡಲಾಗಿದೆ. ಲಿಬಿಯಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರ ಮಧ್ಯಸ್ಥಿಕೆಯಿಂದ ಇದು ಸಾಧ್ಯವಾಗಿದೆ ಎಂದು ಸುಷ್ಮಾ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಐಸಿಸಿ ಸೆರೆಯಿಂದ ಇಬ್ಬರು ಆಂಧ್ರ ಮೂಲದವರನ್ನು ಬಿಡುಗಡೆ ಮಾಡಲಾಗಿತ್ತು. ಲಿಬಿಯಾದ ಲಬ್ನ್-ಎ-ಸಿನಾದ ಆಸ್ಪತ್ರೆಯಲ್ಲಿದ್ದ ಡಾ.ರಾಮಮೂರ್ತಿ ಸೆ.8, 2015ರಲ್ಲಿ ಇನ್ನಿತರೆ ಸಹೋದ್ಯೋಗಿಗಳೊಂದಿಗೆ ಅಪಹರಣಕ್ಕೆ ಒಳಗಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.