ಹೈದರಾಬಾದ್ : ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ ಐಐ) ಸಿಇಒ ಆದರ್ ಪೂನವಾಲ್ಲಾ ಅವರು ರಾಜ್ಯ ಸರ್ಕಾರಗಳಿಗೆ ಕೋವಿಶೀಲ್ಡ್ ಬೆಲೆಯಲ್ಲಿ ಪ್ರತಿ ಡೋಸ್ 100ರೂ. ಕಡಿತವನ್ನು ಘೋಷಿಸಿದ್ದಾರೆ.
ಈ ಹಿನ್ನಲೆಯಲ್ಲಿ ಒಂದು ದಿನದ ನಂತರ ಸ್ಥಳೀಯ ಕೋವಿಡ್ -19 ಲಸಿಕೆ ಡೆವಲಪರ್ ಭಾರತ ಬಯೋಟಿಕ್ ಇದನ್ನು ಅನುಸರಿಸಿ ಪ್ರತಿ ಡೋಸ್ ಗೆ 200ರೂ ಇಳಿಕೆ ಮಾಡಿದೆ. ಭಾರತ್ ಬಯೋಟೆಕ್ ಲಸಿಕೆ ಬೆಲೆಯನ್ನು ರಾಜ್ಯ ಸರ್ಕಾರಗಳಿಗೆ ಈ ಹಿಂದೆ ಪ್ರತಿಡೋಸ್ ಗೆ 600ರೂ., 400ರೂ.ಗೆ ಇಳಿಸುವುದಾಗಿ ಘೋಷಿಸಿತ್ತು.
ಆದರೆ ಭಾರತ ಎದುರಿಸುತ್ತಿರುವ ಕೊರೊನಾ ಸನ್ನಿವೇಶ ನೋಡಿ ಭಾರತ್ ಬಯೋಟಿಕ್ ತೀವ್ರ ಕಾಳಜಿ ವಹಿಸಿ ರಾಜ್ಯ ಸರ್ಕಾರಗಳಿಗೆ ಪ್ರತಿಡೋಸ್ ಗೆ 400 ರೂ.ಗಳ ದರದಲ್ಲಿ ಲಭ್ಯಗೊಳಿಸಿರುವುದಾಗಿ ತಿಳಿಸಿದೆ.