Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಿಂದುಗಳಿಗೆ ಭಾರತ ಏಕಮಾತ್ರ ದೇಶವಾಗಿದೆ, ಮುಸ್ಲಿಮರಿಗೆ 50 ಕ್ಕೂ ಹೆಚ್ಚು ದೇಶಗಳಿವೆ: ಶಿವಸೇನೆ

ಹಿಂದುಗಳಿಗೆ ಭಾರತ ಏಕಮಾತ್ರ ದೇಶವಾಗಿದೆ, ಮುಸ್ಲಿಮರಿಗೆ 50 ಕ್ಕೂ ಹೆಚ್ಚು ದೇಶಗಳಿವೆ: ಶಿವಸೇನೆ
ಮುಂಬೈ , ಸೋಮವಾರ, 30 ಅಕ್ಟೋಬರ್ 2017 (15:37 IST)
ಕೇಂದ್ರದಲ್ಲಿ ಹಿಂದುತ್ವದ ಪರ ಸರಕಾರವಿದ್ದರೂ ಅಯೋಧ್ಯೆಯ ರಾಮಮಂದಿರ ಮತ್ತು ಕಾಶ್ಮಿರಿ ಪಂಡಿತರ ಸಮಸ್ಯೆಗಳನ್ನು ಇತ್ಯರ್ಥ್ಯಗೊಳಿಸಲು ಸಾಧ್ಯವಾಗಿಲ್ಲ ಎಂದು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಮಿತ್ರಪಕ್ಷವಾದ ಶಿವಸೇನೆ ವಾಗ್ದಾಳಿ ನಢೆಸಿದೆ.
ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಇತ್ತೀಚೆಗೆ ನೀಡಿದ ಹಿಂದುಸ್ತಾನ್ ಹಿಂದುಗಳ ದೇಶ. ಆದರೆ. ಇದರ್ಥ ಭಾರತ ಬೇರೆಯವರಿಗೆ ಸೇರಿದ್ದಲ್ಲ ಎಂದರ್ಥವಲ್ಲ ಎನ್ನುವ ಹೇಳಿಕೆ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ. 
 
ಹಿಂದೂಗಳಂತೆ ಭಾರತವು ಇತರರಿಗೆ ಸೇರಿದ್ದಾಗಿದೆ. ಆದರೆ, ಭಾರತ ಮೊದಲು ಹಿಂದುಗಳಿಗೆ ಸೇರಿದೆ ನಂತರ ಇತರ ಧರ್ಮದವರಿಗೆ ಸೇರಿದ್ದಾಗಿದೆ. ಯಾಕೆಂದರೆ ಮುಸ್ಲಿಮರಿಗೆ ವಲಸೆ ಹೋಗಲು ಜಗತ್ತಿನಲ್ಲಿ 50 ಕ್ಕೂ ಹೆಚ್ಚು ಮುಸ್ಲಿಂ ದೇಶಗಳಿವೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
 
ಕ್ರಿಶ್ಚಿಯನ್ನರಿಗೆ ಅಮೆರಿಕ, ಯುರೋಪ್ ದೇಶಗಳಿವೆ. ಬುದ್ದರಿಗೆ ಚೀನಾ, ಜಪಾನ್ , ಶ್ರೀಲಂಕಾ ಮತ್ತು ಮ್ಯಾನ್ಮಾರ್‌ನಂತಹ ದೇಗಳಿವೆ. ಆದರೆ, ಹಿಂದುಗಳಿಗೆ ಭಾರತ ಏಕಮಾತ್ರ ದೇಶವಾಗಿದೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿಗೆ ವಿಷಪೂರಿತ ಚಿಪ್ಸ್ ನೀಡಿ ಕೊಂದ ಆಶಾ ಕಾರ್ಯಕರ್ತೆ