ಲಾಡನ್ ಕೊಂದಿದ್ದು ನಾನಲ್ಲ ಎಂದು ಒಬಾಮಾ ಬಹುದೊಡ್ಡ ರಹಸ್ಯವನ್ನು ಅಮೇರಿಕಾದ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮಾ ಬಹಿರಂಗ ಪಡಿಸಿದ್ದಾರೆ.
ಲಾಡೆನ್ ಹತ್ಯೆಗೆ ತಂತ್ರ ರೂಪಿಸಿದ್ದು ಯಾರು ಎಂಬ ಪ್ರಶ್ನೆ ಎಲ್ಲರಲ್ಲಿತ್ತು. ಆದರೆ ಅಮೇರಿಕಾ ಈವರೆಗೂ ಇದಕ್ಕೆ ಉತ್ತರ ನೀಡಿರಲಿಲ್ಲ. ಮತ್ತೀಗ ಸತ್ಯವನ್ನು ಒಬಾಮಾ ಹೊರಹಾಕಿದ್ದಾರೆ.
ಉಪಾಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಜೋ ಬಿಡನ್ ಅವರಿಗೆ ವಿದಾಯ ನೀಡಲು ಆಯೋಜಿಸಲಾಗಿದ್ದ ಭಾವನಾತ್ಮಕ ಸಮಾರಂಭದಲ್ಲಿ ಅವರಿಗೆ ಒಬಾಮಾ, ಸರ್ಪ್ರೈಸ್ ಆಗಿ ಅಮೇರಿಕದ ಅತ್ಯುನ್ನತ ಪ್ರಶಸ್ತಿ, 'ಪ್ರೆಸಿಡೆಂಟ್ ಮೆಡಲ್ ಆಫ್ ಫ್ರೀಡಂ' ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಒಬಾಮಾ, ಅಮೇರಿಕ ಕಂಡ ಅತ್ಯಂತ ಶ್ರೇಷ್ಠ ಉಪಾಧ್ಯಕ್ಷರಿವರು, 'ಅಮೇರಿಕಾ ಇತಿಹಾಸದ ಸಿಂಹ' ಎಂದು ತಮ್ಮ ಜತೆ ನಿರ್ಗಮಿಸುತ್ತಿರುವ ಸಹೋದ್ಯೋಗಿಯನ್ನು ಹೊಗಳಿದ್ದಾರೆ.
ಇದೇ ಸಂದರ್ಭದಲ್ಲಿ ಜಗತ್ತು ತಮ್ಮ ದೇಶವನ್ನು ಕೇಳುತ್ತಿದ್ದ ಬಹುದೊಡ್ಡ ಪ್ರಶ್ನೆಗೆ ಉತ್ತರಿಸಿದ ಅವರು, ಅಂತರಾಷ್ಟ್ರೀಯ ಭಯೋತ್ಪಾದಕನನ್ನು ಕೊಲ್ಲಲು ತಂತ್ರ ರೂಪಿಸಿದ್ದು ಉಪಾಧ್ಯಕ್ಷ ಜೋ ಬಿಡನ್. ಇರಾಕ್ ಮೇಲಿನ ಯುದ್ಧಕ್ಕೂ ಕಾರ್ಯತ್ರಂತ್ರ ಅವರದೇ. 'ಗನ್ ಕಂಟ್ರೋಲ್ ಪಾಲಿಸಿ' ರೂಪಿಸಿದ್ದು ಸೇರಿದಂತೆ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ಮಹತ್ವದ ನಿರ್ಧಾರಗಳ ಹಿಂದೆ ಜೋ ಬಿಡನ್ ಇದ್ದರು ಎಂದು ಬಾಯ್ಬಿಟ್ಟಿದ್ದಾರೆ.
ಜಿಹಾದಿ ಭಯೋತ್ಪಾದಕ ಸಂಸ್ಥೆಯಾದ ಅಲ್ ಖೈದಾದ ಸಂಸ್ಥಾಪಕ, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸೆಪ್ಟೆಂಬರ್ ೧೧ ೨೦೦೧ರಂದು ನಡೆದ ದಾಳಿ ಮತ್ತು ಇನ್ನೂ ಅನೇಕ ನಾಗರಿಕ ಮತ್ತು ಸೈನ್ಯ ಗುರಿಗಳ ಮೇಲೆ ನಡೆದ ದಾಳಿಗಳಿಗೆ ಜವಾಬ್ದಾರನಾಗಿದ್ದ 'ಒಸಾಮಾ ಬಿನ್ ಲಾಡೆನ್'ಭಾನುವಾರ, ಮೇ ೧, ೨೦೧೧ ರಂದು ಸುಮಾರು ರಾತ್ರಿ ೧೦:೩೦ ಅಮೆರಿಕಾದ ಮಿಲಿಟರಿ ಪಡೆಯಿಂದ ಪಾಕಿಸ್ತಾನದ ಅಬ್ಬೋತ್ತಬಾದ್‌ನಲ್ಲಿ ಹತನಾಗಿದ್ದ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ