ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್‌ಗೆ ಕಲ್ಲುಗಲಿಂದ ಹೊಡೆದು ರಾಜ್ಯದಿಂದ ಹೊರಗಟ್ಟಬೇಕು ಎಂದು ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಮೌಲಾನಾ ನೂರ್-ಉರ್-ರೆಹಮಾನ್ ಫತ್ವಾ ಹೊರಡಿಸಿದ್ದಾರೆ.
ಗೌರವಾನ್ವಿತ ಹುದ್ದೆಯಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಘೋಷ್‌ರನ್ನು ಕಲ್ಲಿನಿಂದ ಹೊಡೆಯುತ್ತಾ ರಾಜ್ಯದಿಂದ ಹೊರಗೆ ಕಳುಹಿಸಬೇಕು ಎಂದು ಮುಸ್ಲಿಂ ಮೌಲ್ವಿ ಮೌಲಾನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಜಾತ್ಯಾತೀತ ನಾಯಕಿಯಾದ ಸಿಎಂ ಬ್ಯಾನರ್ಜಿ ವಿರುದ್ಧ ಅಂತಹ ಅಸಭ್ಯ ಭಾಷೆಗಳನ್ನು ಬಳಸಿರುವ ಬಿಜೆಪಿ ಮುಖಂಡ ಘೋಷ್, ಪಶ್ಚಿಮ ಬಂಗಾಳದಲ್ಲಿ ವಾಸಿಸಲು ಯೋಗ್ಯನಲ್ಲ. ಆತನನ್ನು ಕಲ್ಲಿನಿಂದ ಹೊಡೆದು ರಾಜ್ಯದಿಂದ ಹೊರಗೆ ತಳ್ಳಬೇಕು ಎಂದು ಕರೆ ನೀಡಿದ್ದಾರೆ.
ಮೌಲ್ವಿ ಕರೆಗೆ ತಿರುಗೇಟು ನೀಡಿರುವ ಘೋಷ್, ಫತ್ವಾ ಹೊರಡಿಸಲು ಇದೇನು ಪಾಕಿಸ್ತಾನ ಅಥವಾ ಬಾಂಗ್ಲಾದೇಶವಲ್ಲ ಎಂದು ಕಿಡಿಕಾರಿದ್ದಾರೆ.
ಮುಸ್ಲಿಂ ಮೌಲ್ವಿ ಮೌಲಾನಾ ನೂರ್ ಬರ್ಕಾತಿ, ತೃಣಮೂಲ ಕಾಂಗ್ರೆಸ್ ಪಕ್ಷದ ವಿರುದ್ಧ ಫತ್ವಾ ಹೊರಡಿಸಲಿ. ಟಿಎಂಸಿ ಫತ್ವಾವನ್ನು ಪಾಲಿಸುತ್ತದೆಯೇ ಹೊರತು ಬಿಜೆಪಿಯಲ್ಲ. ಬರ್ಕಾತಿಗೆ ದೀರ್ಘಾವಧಿಯಲ್ಲಿ ಪಶ್ಚಿಮ ಬಂಗಾಳ ಮತ್ತು ಭಾರತದಲ್ಲಿರಲು ಬಯಸಿದಂತೆ ಕಾಣುತ್ತಿಲ್ಲ. ನನ್ನ ಪ್ರಕಾರ ಅವರು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ವಲಸೆ ಹೋಗುವ ಯೋಚನೆಯಲ್ಲಿರಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.