ಪಣಜಿ: ಸುಂದರವಾದ ಪ್ರಕೃತಿ ಸೌಂದರ್ಯವನ್ನು ಕಂಡಾಗ ಎಲ್ಲರೂ ಒಂದು ಫೋಟೋವನ್ನು ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಈ ಪ್ರದೇಶದಲ್ಲಿ ಪ್ರಕೃತಿ ಸೌಂದರ್ಯದ ಫೋಟೊ ತೆಗೆದರೆ ಶುಲ್ಕ ತೆರಬೇಕಾಗುತ್ತದೆ.
ಹೌದು. ಗೋವಾದ ಪರ್ರಾ ಗ್ರಾಮ ಸುಂದರವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದ್ದು, ರಸ್ತೆ ಬದಿಯಲ್ಲಿ ಸುಂದರವಾದ ತೆಂಗಿನ ಮರಗಳನ್ನು ಬೆಳೆಸಲಾಗಿದೆ. ಈ ಸುಂದರ ರಮಣೀಯ ದೃಶ್ಯವನ್ನು ನೋಡಿದಾಕ್ಷಣ ಒಂದು ಫೋಟೊ ತೆಗೆಯಬೇಕೆನಿಸುತ್ತದೆ.
ಆದರೆ ಇಲ್ಲಿನ ಗ್ರಾಮ ಪಂಚಾಯಿತಿ ಇಲ್ಲಿ ಫೋಟೊ ತೆಗೆದವರಿಗೆ 100ರೂನಿಂದ 500ರೂ.ಶುಲ್ಕ ವಿಧಿಸಲಿದೆ. ಇದಕ್ಕೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದು ಸ್ವಚ್ಛತಾ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.