ನವದೆಹಲಿ : ರಿಸರ್ವ್ ಬ್ಯಾಂಕ್‌ನ ಅಧಿಕಾರಿಗಳು ಹಾಗೂ ನೌಕರರ ಸಂಘಟನೆ ಫೋರಂ(ಯುಎಫ್‌ಆರ್‌ಬಿಒಇ) ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ದಿನಗಳ ಸಾಮೂಹಿಕ ರಜೆ ಘೋಷಣೆ ಮಾಡಿದೆ.
ರಿಟೇನರ್‌ಗಳಿಗೆ ಸಿಪಿಎಫ್(ಕಾಂಟ್ರಿಬಿಟರಿ ಪಿಎಫ್) ಪೆನ್ಶನ್ ಯೋಜನೆ ಹಾಗೂ 2012ರಿಂದ ನೇಮಕಗೊಂಡಿರುವವರಿಗೆ ಹೆಚ್ಚುವರಿ ಪಿಎಫ್ ನೀಡಬೇಕು ಎಂಬುದು ಫೋರಂನ ಆಗ್ರಹವಾಗಿದೆ. ಈ ಬಗ್ಗೆಊರ್ಜಿತ್ ಪಟೇಲ್ ಅವರು 2017ರಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದರು. ಆದರೆ ಇದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.
ಈ ಹಿನ್ನಲೆಯಲ್ಲಿ ಇದೀಗ ಈ ಬೇಡಿಕೆಗಳನ್ನು ಈಡೇರಿಸುವಂತೆ ಫೋರಂ ಸೆ.4 ಮತ್ತು 5ರಂದು ಎರಡು ದಿನಗಳ ಸಾಮೂಹಿಕ ರಜೆಗೆ ಕರೆ ನೀಡಿದೆ. ಇದರಲ್ಲಿ ಬ್ಯಾಂಕ್‌ನ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಲಿದ್ದು, ಇದರಿಂದ ಕೇಂದ್ರೀಯ ಬ್ಯಾಂಕ್ ಹಾಗೂ ದೇಶಾದ್ಯಂತ ಇರುವ, ಇದರ ಅಧೀನ ಬ್ಯಾಂಕ್‌ಗಳ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ