Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಧಾನಿ ಮೋದಿ ಹೆಲಿಕಾಪ್ಟರ್ ತಪಾಸಣೆ ಮಾಡಿದ ಅಧಿಕಾರಿ ಸಸ್ಪೆಂಡ್

ಪ್ರಧಾನಿ ಮೋದಿ ಹೆಲಿಕಾಪ್ಟರ್ ತಪಾಸಣೆ ಮಾಡಿದ ಅಧಿಕಾರಿ ಸಸ್ಪೆಂಡ್
ನವದೆಹಲಿ , ಗುರುವಾರ, 18 ಏಪ್ರಿಲ್ 2019 (08:45 IST)
ನವದೆಹಲಿ: ಪ್ರಧಾನಿ ಮೋದಿಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ ಮಾಡಿದ ಕರ್ನಾಟಕ ಮೂಲದ ಚುನಾವಣಾಧಿಕಾರಿ ಮೊಹಮ್ಮದ್ ಮೊಹ್ಸಿನ್ ರನ್ನು ಸಸ್ಪೆಂಡ್ ಮಾಡಲಾಗಿದೆ.


ಐಎಎಸ್ ಅಧಿಕಾರಿಯಾಗಿರುವ ಮೊಹಮ್ಮದ್ ಮೊಹ್ಸಿನ್ ಒಡಿಶಾದ ಸಂಬಲಾಪುರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಯಾಣಿಸುತ್ತಿದ್ದ ಕಾಪ್ಟರ್ ತಪಾಸಣೆ ನಡೆಸಿದ್ದಾರೆ.

ಹೆಲಿಕಾಪ್ಟರ್ ನಲ್ಲಿ ಪ್ರಧಾನಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಮೊಹ್ಸಿನ್ ತಪಾಸಣೆ ನಡೆಸಿದ್ದರು. ಇದರಿಂದಾಗಿ ಪ್ರಧಾನಿ ಕಾರ್ಯಕ್ರಮಕ್ಕೆ ತೆರಳಲು ಅರ್ಧಗಂಟೆ ತಡವಾಗಿತ್ತು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಈ ಸಂಬಂಧ ಇದೀಗ ಮೊಹ್ಸಿನ್ ರನ್ನು ಅಮಾನತುಗೊಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

Share this Story:

Follow Webdunia kannada

ಮುಂದಿನ ಸುದ್ದಿ

ಮತ ಚಲಾಯಿಸಿದ ಸದಾನಂದಗೌಡರು ಬೆಂಗಳೂರಿನ ಜನಕ್ಕೆ ಹೇಳಿದ್ದೇನು ಗೊತ್ತಾ?