Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೋಟು ನಿಷೇಧ ಹೇರಿ ದೇಶವನ್ನು ಉಳಿಸಿದ್ದೇನೆ: ಪ್ರಧಾನಿ ಮೋದಿ

ನೋಟು ನಿಷೇಧ ಹೇರಿ ದೇಶವನ್ನು ಉಳಿಸಿದ್ದೇನೆ: ಪ್ರಧಾನಿ ಮೋದಿ
ಪುಣೆ , ಭಾನುವಾರ, 25 ಡಿಸೆಂಬರ್ 2016 (11:16 IST)
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ದೇಶಾದ್ಯಂತ ನೋಟು ನಿಷೇಧ ಹೇರುವ ಮೂಲಕ ದೇಶವನ್ನು ಉಳಿಸಿದ್ದೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
 
ಒಂದು ವೇಳೆ ಹಿಂದಿನ ಸರಕಾರಗಳು ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಕ್ರಮಕೈಗೊಂಡಿದ್ದಲ್ಲಿ ಕಠಿಣವಾದ ನೋಟು ನಿಷೇಧ ಹೇರುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನೋಟು ನಿಷೇಧವನ್ನು ಸಮರ್ಥಿಸಿಕೊಂಡಿದ್ದಾರೆ.
 
ಕಳೆದ 40 ವರ್ಷಗಳಲ್ಲಿ ಸಮಯಕ್ಕೆ ತಕ್ಕಂತೆ ಸರಕಾರಗಳು ಭ್ರಷ್ಟರನ್ನು ಮಟ್ಟ ಹಾಕಿ ಕಪ್ಪು ಹಣದ ಕುಳಗಳಿಗೆ ತಕ್ಕ ಶಿಕ್ಷೆ ವಿಧಿಸಿದ್ದಲ್ಲಿ ಇಂತಹ ಕಠಿಣ ಸ್ಥಿತಿ ಎದುರಾಗುತ್ತಿರಲಿಲ್ಲ ಎಂದಿದ್ದಾರೆ.
 
ದೇಶಾದ್ಯಂತ ಭ್ರಷ್ಟಾಚಾರ ಮತ್ತು ಕಪ್ಪು ಹಣ ತಾಂಡವವಾಡುತ್ತಿತ್ತು. ನಾನು ನೀಡಿದ ಆಶ್ವಾಸನೆಯಂತೆ ನೋಟು ನಿಷೇಧ ಹೇರುವ ಮೂಲಕ ದೇಶವನ್ನು ಉಳಿಸಿದ್ದೇನೆ ಎಂದು ಪುಣೆ ಮೆಟ್ರೋ ಪ್ರೊಜೆಕ್ಟ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
 
ನೋಟು ನಿಷೇಧವನ್ನು ಸಮರ್ಥಿಸಿಕೊಂಡ ಅವರು, ಭ್ರಷ್ಟಾಚಾರಗಳು ಮತ್ತು ಕಪ್ಪು ಹಣ ಹೊಂದಿದವರು ಕೂಡಲೇ ಸರಕಾರದ ಆದೇಶವನ್ನು ಪಾಲಿಸಿ ಪ್ರಾಮಾಣಿಕರಾಗಬೇಕು. ಇಲ್ಲವಾದಲ್ಲಿ ಅಂತಹ ವ್ಯಕ್ತಿಗಳಿಗೆ ಮುಂದೆ ಕಾದಿದೆ ಮಾರಿಹಬ್ಬ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
 
ನೋಟು ನಿಷೇಧ ಹೇರಿದ ನಂತರ ಭ್ರಷ್ಟರು ನಿದ್ರೆಯನ್ನು ಮರೆತಿದ್ದರೆ ಪ್ರಾಮಾಣಕರು ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯಾದ ಮಿಲಿಟರಿ ವಿಮಾನ ನಿಗೂಢ ನಾಪತ್ತೆ