Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ರೇಸ್‌ನಲ್ಲಿ ನಾನಿಲ್ಲ: ನಿತೀಶ್ ಕುಮಾರ್

ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ರೇಸ್‌ನಲ್ಲಿ ನಾನಿಲ್ಲ: ನಿತೀಶ್ ಕುಮಾರ್
ಪಾಟ್ನಾ , ಸೋಮವಾರ, 15 ಮೇ 2017 (15:53 IST)
2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ವರದಿಗಳನ್ನು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ತಳ್ಳಿಹಾಕಿದ್ದಾರೆ. 
 
ಮೂರು ವರ್ಷಗಳ ಹಿಂದೆ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲಿದ್ದಾರೆ ಎನ್ನುವುದು ಯಾರಿಗೆ ಗೊತ್ತಿತ್ತು. ಮೋದಿ ಪ್ರಧಾನಿಯಾಗಲು ಅರ್ಹರಿದ್ದಾರೆ.ಅವರ ಅರ್ಹತೆಯನ್ನು ಕಂಡ ಜನತೆ ಬಿಜೆಪಿಗೆ ಮತ ನೀಡಿದ್ದಾರೆ. ನನಗೆ ಅಂತಹ ಅರ್ಹತೆಯಿಲ್ಲ. ನಾನು ಸಣ್ಣಪಕ್ಷದ ನಾಯಕ. ನನಗೆ ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎನ್ನುವ ಹಂಬಲವಿಲ್ಲ ಎಂದು ತಿಳಿಸಿದ್ದಾರೆ. 
 
ಜೆಡಿಯು ಪಕ್ಷ ಪ್ರಾದೇಶಿಕ ಪಕ್ಷವಾಗಿದ್ದರಿಂದ ಕೇವಲ ಜನತೆಯ ಸೇವೆ ಮಾಡುವುದರತ್ತ ಮಾತ್ರ ಗಮನಹರಿಸುತ್ತೇನೆ ಎಂದರು.  
 
ಶರದ್ ಯಾದವ್ ಮೂರು ಅವಧಿಗೆ ಜೆಡಿಯು ಪಕ್ಷದ ಅಧ್ಯಕ್ಷರಾಗಿದ್ದರು. ನಂತರ ಪಕ್ಷದ ಕಾರ್ಯಕರ್ತರು ಆ ಹೊಣೆಯನ್ನು ನನಗದೆ ನೀಡಿದ್ದಾರೆ. ಆದರೆ, ಮಾಧ್ಯಮಗಳು ನನಗೆ ರಾಷ್ಟ್ರಮಟ್ಟದಲ್ಲಿ ಬೆಳೆಯುವ ಬಯಕೆಯಿದೆ ಎನ್ನುವಂತೆ ತೋರಿಸಿದವು. ಪಕ್ಷದ ಅಧ್ಯಕ್ಷನಾಗಿ ಜೆಡಿಯು ಪಕ್ಷವನ್ನು ಇತರ ರಾಜ್ಯಗಳಲ್ಲಿ ವಿಸ್ತರಿಸಲು ಪ್ರಯತ್ನಿಸುತ್ತೇನೆ. ಆದರೆ, ಇದರರ್ಥ ನನಗೆ ಪ್ರಧಾನಿಯಾಗುವ ಕನಸಿದೆ ಎನ್ನುವುದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಸಮ್ಮಿಶ್ರ ಸರಕಾರದ ಪಾಲುದಾರ ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲು ಯಾದವ್ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಮಾತನಾಡಲು ನಿರಾಕರಿಸಿ, ಬಿಜೆಪಿ ಆರೋಪಗಳಿಗೆ ಲಾಲು ಪ್ರತಿಕ್ರಿಯೆ ನೀಡಬೇಕು.ನಾನು ಹೇಳುವುದು ಏನೂ ಇಲ್ಲ. ಯಾರ ಬಳಿಯಾದರೂ ಸಾಕ್ಷ್ಯಗಳಿದ್ದಲ್ಲಿ ಕೋರ್ಟ್‌ಗೆ ಹೋಗಲಿ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಸಿವೆಯನ್ನು ತಾಳದೇ ಹೋಟೆಲ್‌ ಮುಂದೆ ಹೆಲಿಕಾಪ್ಟರ್‌ ಇಳಿಸಿದ ಪೈಲಟ್