Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಮ್ಮ, ದೀಪಾವಳಿ ಪಾಕಿಸ್ತಾನದೊಂದಿಗೆ ಆಚರಿಸುತ್ತಿದ್ದೇನೆ: ಹುತಾತ್ಮನಾಗುವ ಮುನ್ನ ತಾಯಿಗೆ ಹೇಳಿದ ಸೈನಿಕ

ಅಮ್ಮ, ದೀಪಾವಳಿ ಪಾಕಿಸ್ತಾನದೊಂದಿಗೆ ಆಚರಿಸುತ್ತಿದ್ದೇನೆ: ಹುತಾತ್ಮನಾಗುವ ಮುನ್ನ ತಾಯಿಗೆ ಹೇಳಿದ ಸೈನಿಕ
ಜಮ್ಮು ಕಾಶ್ಮಿರ , ಮಂಗಳವಾರ, 25 ಅಕ್ಟೋಬರ್ 2016 (18:11 IST)
ಜಮ್ಮು ಕಾಶ್ಮಿರದ ಆರ್‌.ಎಸ್.ಪುರಾ ಸೆಕ್ಟರ್‌ನಲ್ಲಿ ರವಿವಾರದಂದು ಪಾಕಿಸ್ತಾನ ಸೇನೆಯ ಗುಂಡಿನ ದಾಳಿಗೆ ಹುತಾತ್ಮನಾದ ಬಿಎಸ್‌ಎಫ್ ಯೋಧ, ಹುತಾತ್ಮನಾಗುವ ಕೆಲವೇ ನಿಮಿಷಗಳ ಮುಂಚೆ ತನ್ನ ತಾಯಿಗೆ ಅಮ್ಮ ದೀಪಾವಳಿ ಹಬ್ಬವನ್ನು ಪಾಕಿಸ್ತಾನದೊಂದಿಗೆ ಆಚರಿಸುತ್ತಿದ್ದೇನೆ ಎಂದು ನೀಡಿದ ಹೇಳಿಕೆ ಕಣ್ಣೀರು ತರಿಸುವಂತಹದಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಮಧ್ಯ ರಾತ್ರಿ 12 ಗಂಟೆಗೆ ಸುಶೀಲ್ ಕುಮಾರ್ ತನ್ನ ತಾಯಿಗೆ ಕರೆ ಮಾಡಿದಾಗ ಪಾಕಿಸ್ತಾನಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿತ್ತು. ಗುಂಡಿನ ಶಬ್ದ ಕೇಳಿದ ತಾಯಿ, ಆತಂಕಗೊಂಡು ಮಗು ಅಲ್ಲಿ ಏನಾಗುತ್ತಿದೆ ಎಂದು ಕೇಳಿದಾಗ ವೀರ ಯೋಧ, ಅಮ್ಮ ನಾವು ಪಾಕಿಸ್ತಾನದೊಂದಿಗೆ ದೀಪಾವಳಿ ಆಚರಿಸುತ್ತಿದ್ದೇವೆ ಎಂದು ಉತ್ತರಿಸಿದ್ದ ಗಂಡು ಗಲಿ ಸೈನಿಕ. 
 
ಕುರುಕ್ಷೇತ್ರದ ಪಿಹೋವಾ ನಿವಾಸಿಯಾಗಿದ್ದ ವೀರಯೋಧ ಸುಶೀಲ್ ಕುಮಾರ್‌ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಸುಶೀಲ್ ಕುಮಾರ್ ಹುತಾತ್ಮರಾಗಿದ್ದಾರೆ ಎನ್ನುವ ಸುದ್ದಿ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿದಿತ್ತು. ರಾತ್ರಿ ಮಾತನಾಡಿದ್ದ ಮಗು ಬೆಳಿಗ್ಗೆ ಇಲ್ಲವಾಗಿತ್ತು ಎನ್ನುವ ಸುಶೀಲ್ ತಾಯಿಯ ರೋಧನಕ್ಕೆ ತಡೆಯೊಡ್ಡಲು ಸಾಧ್ಯವೇ?  
 
ಹುತಾತ್ಮ ವೀರಯೋಧ ಸುಶೀಲ್ ಕುಮಾರ್ ಮೃತದೇಹ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು, ಸೇನಾಯೋಧರು ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು. 
 
ಪಾಕಿಸ್ತಾನದ ಪಾಪಿ ಯೋಧರ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸುಶೀಲ್ ಕುಮಾರ್ ರವಿವಾರದಂದು ರಾತ್ರಿ ಇಹಲೋಕ ತ್ಯಜಿಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಿಗಮ, ಮಂಡಳಿ ನೇಮಕಾತಿ ಲಾಬಿ: ರಾಹುಲ್ ಗಾಂಧಿ ಭೇಟಿಗೆ ದೇಶಪಾಂಡೆ ಸಿದ್ದತೆ