Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೋಟೆಲ್‌ನಲ್ಲಿ ಬೌಬೌ ಬಿರಿಯಾನಿ: ಜೈಲು ಸೇರಿಸಿದ ವಾಟ್ಸ್‌ಅಪ್‌

ಹೋಟೆಲ್‌ನಲ್ಲಿ ಬೌಬೌ ಬಿರಿಯಾನಿ: ಜೈಲು ಸೇರಿಸಿದ ವಾಟ್ಸ್‌ಅಪ್‌
ಹೈದರಾಬಾದ್ , ಭಾನುವಾರ, 25 ಡಿಸೆಂಬರ್ 2016 (12:56 IST)
ಮುತ್ತಿನ ನಗರಿ ಹೈದರಾಬಾದ್‌ನ ಪ್ರಸಿದ್ಧ ಹೋಟೆಲ್ ಒಂದರಲ್ಲಿ ಬಿರಿಯಾನಿಗೆ ನಾಯಿ ಮಾಂಸ ಸೇರಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶ ಹರಡಿಸಿದ್ದ ಎಮ್‌ಬಿಎ ವಿದ್ಯಾರ್ಥಿಯೊಬ್ಬ ಈಗ ಜೈಲುಪಾಲಾಗಿದ್ದಾನೆ.

 
ಬಂಧಿತವ ಚಂದ್ರಮೋಹನ್ ಎಂದು ಗುರುತಿಸಲಾಗಿದ್ದು ತನ್ನ ಗೆಳೆಯರು ಸದಾ ಊಟ ಮಾಡಲು ಹೋಗುತ್ತಿದ್ದ ಹೊಟೆಲ್ ಒಂದರಲ್ಲಿ ಬಿರಿಯಾನಿಯಲ್ಲಿ ನಾಯಿ ಮಾಂಸವನ್ನು ಸೇರಿಸುತ್ತಿದ್ದಾರೆ ಎಂದು ವಾಟ್ಸ್‌ಅಪ್‌ ಗುಂಪಿನಲ್ಲಿ ಸಂದೇಶ ರವಾನಿಸಿದ್ದ. ತನ್ನ ಗೆಳೆಯರನ್ನು ಕಾಡಿಸಲು ಆತ ಹೀಗೆ ಮಾಡಿದ್ದು ನಾಯಿಯನ್ನು ಕತ್ತಿರಿಸುತ್ತಿರುವ ಫೋಟೋವನ್ನು ಸಹ ಸಂದೇಶದ ಜತೆ ಹರಿಯಬಿಟ್ಟಿದ್ದ. 
 
ತೆಲುಗಿನಲ್ಲಿದ್ದ ಈ ಸಂದೇಶಗಳು ವಾಟ್ಸ್‌ಅಪ್‌ನಲ್ಲಿ ವೈರಲ್ ಆಗಿ ಹರಿದಾಡಿ ಪೊಲೀಸರು ಹೋಟೆಲ್ ಮೇಲೆ ದಾಳಿ ಮಾಡಿ ಆಹಾರವನ್ನು ಪರೀಕ್ಷಿಸಿದ್ದರು. ಸ್ಥಳೀಯ ಮಾಧ್ಯಮಗಳಲ್ಲಿ ಸಹ ಈ ವಿಷಯ ಬಿತ್ತರವಾಗಿತ್ತು. ಬಳಿಕ ಇದರಲ್ಲಿ ಹುರುಳಿಲ್ಲ ಎಂಬುದು ಬೆಳಕಿಗೆ ಬಂದಿತ್ತು.
 
ಈ ಸುಳ್ಳು ಸಂದೇಶದಿಂದಾಗಿ ನಾನು ನೂರಾರು ಗ್ರಾಹಕರನ್ನು ಕಲೆದುಕೊಂಡಿದ್ದೇನೆ. ನನ್ನ ಹೋಟೆಲ್‌ಗೆ ಕೆಟ್ಟ ಹೆಸರು ಬಂದಿದೆ ಹೊಟೆಲ್ ಮಾಲೀಕ ಮಹ್ಮದ್ ರಬ್ಬಾನಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
 
ತನಿಖೆಯನ್ನು ಕೈಗೊಂಡ ಪೊಲೀಸರು ವಾಟ್ಸ್‌ಅಪ್ ಸಂದೇಶ ಎಲ್ಲಿಂದ ಬಂದಿತ್ತೆಂದು ಟ್ರೇಸ್ ಮಾಡಿ  ಇಷ್ಟೆಲ್ಲ ಆವಾಂತರ ಸೃಷ್ಟಿಸಿದ ಚಂದ್ರಮೋಹನ್‌ನನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜನರ ಬೆಂಬಲ ಇಲ್ಲದೆ ಸಿಎಂ ಸಿದ್ದರಾಮಯ್ಯ ಕಂಗಾಲು: ಪ್ರತಾಪ್ ಸಿಂಹ್