Webdunia - Bharat's app for daily news and videos

Install App

ತಿಂಗಳಿಗೊಮ್ಮೆ ಸ್ನಾನ ಮಾಡೋ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಹೆಂಡತಿ

Krishnaveni K
ಸೋಮವಾರ, 16 ಸೆಪ್ಟಂಬರ್ 2024 (16:38 IST)
ಆಗ್ರಾ: ಗಂಡನ ಕೊಳಕು ಅಭ್ಯಾಸದಿಂದ ಬೇಸತ್ತ ಪತ್ನಿಯೊಬ್ಬಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಘಟನೆ ಆಗ್ರಾದಲ್ಲಿ ನಡೆದಿದೆ. ಮದುವೆಯಾದ 40 ದಿನಗಳಿಗೇ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ಅಷ್ಟಕ್ಕೂ ಏನಾಗಿದೆ ಇಲ್ಲಿದೆ ವಿವರ.

ಗಂಡ ಪ್ರತಿ ದಿನ ಸ್ನಾನ ಮಾಡಲ್ಲ. ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಸ್ನಾನ ಮಾಡುವ ಅಭ್ಯಾಸ. ಇದರಿಂದಾಗಿ ಆತನ ದೇಹದ ಕೆಟ್ಟ ವಾಸನೆ ತಡೆಯಲಾಗುತ್ತಿಲ್ಲ. ಈತನ ಕೊಳಕು ಅಭ್ಯಾಸದಿಂದಾಗಿ ಆತನ ಜೊತೆ ಸಂಸಾರ ಮಾಡುವುದು ಕಷ್ಟವಾಗುತ್ತಿದೆ ಎಂದು ಪತ್ನಿ ಕೋರ್ಟ್ ಗೆ ತಿಳಿಸಿದ್ದಾಳೆ.

ವಾರಕ್ಕೊಮ್ಮೆ ಪತಿ ಮಹಾಶಯ ಗಂಗಾಜಲವನ್ನು ಸಿಂಪಡಿಸುತ್ತಿದ್ದನಂತೆ. ಗಂಗಾಜಲ ಪವಿತ್ರ ಜಲವೆಂದು ಈ ರೀತಿ ಮಾಡುತ್ತಿದ್ದ. ಉಳಿದಂತೆ ಸ್ನಾನವನ್ನೇ ಮಾಡುತ್ತಿರಲಿಲ್ಲ. ತಾನು ಒತ್ತಾಯ ಮಾಡಿದ್ದಕ್ಕೆ ಈ 40 ದಿನಗಳಲ್ಲಿ ಕೇವಲ 6 ಬಾರಿ ಮಾತ್ರ ಸ್ನಾನ ಮಾಡಿದ್ದ. ಆತನ ಬೆವರಿನ ವಾಸನೆಯನ್ನು ತಡೆಯಲಾಗದೇ ಹೆಂಡತಿ ಆತನ ಜೊತೆ ಜಗಳವಾಡಿಕೊಂಡು ತವರು ಮನೆ ಸೇರಿದ್ದಾಳೆ.

ಬಳಿಕ ತವರು ಮನೆಯವರು ಆತನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪವನ್ನು ಮಾಡಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ಆತ ಕೋರ್ಟ್ ಮುಂದೆ ತನ್ನ ವರ್ತನೆ ತಿದ್ದಿಕೊಳ್ಳುವುದಾಗಿ ಹೇಳಿದರೂ ಪತ್ನಿ ಆತನ ಜೊತೆ ಜೀವನ ಮಾಡಲು ಒಪ್ಪುತ್ತಿಲ್ಲ. ಇದರೊಂದಿಗೆ ಕೇವಲ ನಲವತ್ತೇ ದಿನಗಳಲ್ಲಿ ಇಬ್ಬರ ದಾಂಪತ್ಯ ಮುರಿದುಬಿದ್ದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments