ಹರ್ಯಾಣ : ಮಹಿಳೆಯೊಬ್ಬಳಿಗೆ ವಿಷಭರಿತ ಮತ್ತು ಬರುವ ಔಷಧಿ ನೀಡಿ ಗಂಡನ ಮನೆಯವರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹರ್ಯಾಣ ದ ಜಿಂದ್ ಸದರ್ ನಲ್ಲಿ ನಡೆದಿದೆ.
ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆಗೆ ಆಕೆಯ ಇಬ್ಬರು ಮೈದುನರು, ಪತಿ ಹಾಗೂ ಅತ್ತೆ, ಮಾವ ವಿಷಭರಿತ ಮತ್ತಿನ ಔಷಧಿ ನೀಡಿ, ಆಕೆಗೆ ಮಂಪರು ಬಂದಾಗ ಒಬ್ಬೊಬ್ಬರಾಗಿಯೇ ಬಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ತನ್ನ ಗಂಡನ ಮನೆಯವರ ವಿರುದ್ಧ ಹರ್ಯಾಣದ ಜಿಂದ್ ಸದರ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ವಿಷ ನೀಡಿ ಕೊಲೆಗೆ ಯತ್ನ ಹೀಗೆ ಅನೇಕ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.