ಹೈದರಾಬಾದ್: ತೆಲಂಗಾಣದ ವ್ಯಕ್ತಿಯೊಬ್ಬ ಪತ್ನಿ ಮಟನ್ ಕರಿ ಮಾಡಿಕೊಡಲಿಲ್ಲವೆಂಬ ಸಿಟ್ಟಿಗೆ ಪದೇ ಪದೇ ಪೊಲೀಸರಿಗೆ ದೂರು ನೀಡಿ ಈಗ ತಾನೇ ಅರೆಸ್ಟ್ ಆಗಿದ್ದಾನೆ.
ಮದ್ಯದ ಅಮಲಿನಲ್ಲಿ ಪತ್ನಿಗೆ ಮಟನ್ ಕರಿ ಮಾಡಿಕೊಡುವಂತೆ ಕೇಳಿದ್ದಾನೆ. ಆದರೆ ಆಕೆ ಮಾಡಿಕೊಡದೇ ಇದ್ದಾಗ ಪತ್ನಿ ಮೇಲೆ ಆಕ್ರೋಶಗೊಂಡ ವ್ಯಕ್ತಿ ಪೊಲೀಸ್ ಸಹಾಯವಾಣಿ 100 ಕ್ಕೆ ಪದೇ ಪದೇ ಕರೆ ಮಾಡಿ ಪತ್ನಿ ವಿರುದ್ಧ ದೂರಿದ್ದಾನೆ.
ಮೊದಲು ಪೊಲೀಸರೂ ಆತನ ಕರೆಯನ್ನು ನಿರ್ಲಕ್ಷಿಸಿದ್ದರು. ಆದರೆ ಈತನ ಕಿರಿ ಕಿರಿ ಮಿತಿ ಮೀರಿದಾಗ ಸಿಟ್ಟಿಗೆದ್ದ ಪೊಲೀಸರು ಆತನನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ.