ಲುಥಿಯಾನಾ: ಮಾದಕ ದ್ರವ್ಯ ವ್ಯಸನಿಯಾದರೆ ಮನುಷ್ಯನನ್ನು ಎಂತಹ ಹೀನ ಕೃತ್ಯಕ್ಕೆ ಇಳಿಸುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಇಲ್ಲೊಬ್ಬ ಮಾದಕ ವಸ್ತು ಖರೀದಿಸಲು ಹಣ ಬೇಕೆಂದು ಪತ್ನಿಯನ್ನೇ ಸ್ನೇಹಿತರೊಂದಿಗೆ ಹಾಸಿಗೆ ಹಂಚಲು ಬಿಟ್ಟಿದ್ದಾನೆ!
ಲುಥಿಯಾನಾದಲ್ಲಿ ಈ ಘಟನೆ ನಡೆದಿದೆ. 22 ವರ್ಷದ ಮಹಿಳೆ ತನ್ನ ಗಂಡನ ಸ್ನೇಹಿತರಿಂದಲೇ ಅತ್ಯಾಚಾರಕ್ಕೊಳಗಾಗಿದ್ದಾಳೆ. ಆ ಕಾಮುಕ ಸ್ನೇಹಿತರು ಆಕೆಯನ್ನು ಅತ್ಯಾಚಾರವೆಸಗಿದ್ದಲ್ಲದೆ, ಆಕೆಯ ನಗ್ನ ಚಿತ್ರಗಳನ್ನು ಚಿತ್ರೀಕರಿಸಿದ್ದಾರೆ.
ಇದೀಗ ಮಹಿಳೆಯ ಪತಿ ಮತ್ತು ಸ್ನೇಹಿತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದಂಪತಿಗೆ 2011 ರಲ್ಲಿ ವಿವಾಹವಾಗಿದ್ದು, ಒಂದು ಮಗು ಕೂಡಾ ಇದೆ ಎನ್ನಲಾಗಿದೆ.