ಚೆನ್ನೈ: ತಮಿಳುನಾಡು ಸಿಎಂ ಜಯಲಲಿತಾ ಸಾವನ್ನಪ್ಪಿ ವರ್ಷ ಕಳೆದರೂ ಅವರ ಸಾವಿನ ಬಗ್ಗೆ ಇರುವ ಅನುಮಾನಗಳು ಕೊನೆಯಾಗಿಲ್ಲ. ಇದೀಗ ತಮಿಳುನಾಡಿನ ಉನ್ನತ ಅಧಿಕಾರಿಯೊಬ್ಬರು ಸಾವಿನ ಬಗ್ಗೆ ಹೊಸದೊಂದು ಮಾಹಿತಿ ಕೊಟ್ಟಿದ್ದಾರೆ.
ಜಯಲಲಿಯಾ ಅಪೋಲೋ ಆಸ್ಪತ್ರೆಗೆ ಬರುವಾಗಲೇ ನಿಸ್ತೇಜ ಸ್ಥಿತಿಯಲ್ಲಿ ಬಂದಿದ್ದರು, ಉಸಿರಾಟವಿರಲಿಲ್ಲ ಎಂದು ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷೆ ಪ್ರೀತಾ ರೆಡ್ಡಿ ಹೇಳಿದ್ದಾರೆ.
‘ಇಲ್ಲಿಗೆ ಬಂದಾಗ ಅವರು ನಿಸ್ತೇಜ ಸ್ಥಿತಿಯಲ್ಲಿದ್ದರು. ಆದರೆ ಚಿಕಿತ್ಸೆಯ ನಂತರ ಸ್ವಲ್ಪ ಸುಧಾರಿಸಿದರು. ಹಾಗಿದ್ದರೂ ನಮಗೆ ಅವರನ್ನು ಉಳಿಸಲಾಗಲಿಲ್ಲ. ಹಾಗಂದ ಮಾತ್ರಕ್ಕೆ ನಾವು ಚಿಕಿತ್ಸೆ ಸರಿಯಾಗಿ ನೀಡಲಿಲ್ಲ ಎಂದಲ್ಲ. ನಮ್ಮಿಂದ ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡಿದೆವು. ದೆಹಲಿಯಿಂದಲೂ ವೈದ್ಯರನ್ನು ಕರೆಸಿದೆವು. ಹಾಗಿದ್ದರೂ ನಮಗೆ ಬೇಕಾದ ಫಲಿತಾಂಶ ಸಿಗಲಿಲ್ಲ’ ಎಂದು ಪ್ರೀತಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ