ನವದೆಹಲಿ: ಸರ್ಕಾರದ ಎಲ್ಲಾ ಯೋಜನೆಗಳಿಗೂ ಇದೀಗ ಆಧಾರ್ ಕಡ್ಡಾಯವಾಗಿದೆ. ಹಾಗಂತ ಆಧಾರ್ ಕಾರ್ಡ್ ಜೇಬಿನಲ್ಲಿ ಸುಮ್ಮನೆ ಕೂತರೆ ಪ್ರಯೋಜನವಿಲ್ಲ.
ಬಳಕೆ ಮಾಡದೇ ಮೂರು ವರ್ಷ ಇಟ್ಟರೆ ಆಧಾರ್ ನಿಷ್ಕ್ರಿಯವಾಗಿಲಿದೆ. ಹಾಗಾಗಿ ಬ್ಯಾಂಕ್ ಖಾತೆಗೆ ಜೋಡಣೆ ಮಾಡುವುದು ಸೇರಿದಂತೆ ಚಾಲ್ತಿಯಲ್ಲಿಡದೇ ಇದ್ದರೆ ಕಾರ್ಡ್ ರದ್ದಾಗಲಿದೆ ಎಂದು ಆಧಾರ್ ಸಹಾಯವಾಣಿ ಮಾಹಿತಿ ನೀಡಿದೆ.
ಬ್ಯಾಂಕ್ ಖಾತೆ, ಅಡುಗೆ ಅನಿಲ, ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡುವುದು ಮುಂತಾದ ಕೆಲಸ ಮಾಡುತ್ತಿರಬೇಕು. ಒಂದು ವೇಳೆ ನಿಷ್ಕ್ರಿಯವಾಗಿದ್ದರೆ ಆಧಾರ್ ಕೇಂದ್ರಕ್ಕೆ ತೆರಳಿ ಅಪ್ ಡೇಟ್ ಮಾಡಲು ಅರ್ಜಿ ಸಲ್ಲಿಸಬೇಕು.
ಇದಕ್ಕೆ 25 ರೂ. ಶುಲ್ಕ ಪಾವತಿಸಬೇಕು. ಮೊಬೈಲ್ ಸಂಖ್ಯೆ, ಬಯೋಮೆಟ್ರಿಕ್ ಮಾಹಿತಿ ಹಾಗೂ ಎಲ್ಲಾ ದಾಖಲೆ ಪತ್ರಗಳನ್ನು ನೀಡಬೇಕು. ನೆನಪಿಡಿ ಇದನ್ನು ಆನ್ ಲೈನ್ ನಲ್ಲಿ ಮಾಡಲು ಸಾಧ್ಯವಿಲ್ಲ. ಆದರೆ ನಿಷ್ಟ್ರಿಯವಾಗಿದೆಯೇ ಎಂದು ಆನ್ ಲೈನ್ ನಲ್ಲಿ ಪರೀಕ್ಷಿಸಬಹುದು.
ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವೆಬ್ ಸೈಟ್ ಓಪನ್ ಮಾಡಿ ವೆರಿಫೈ ಆಧಾರ್ ಕ್ಲಿಕ್ ಮಾಡಿ. ಆಧಾರ್ ನಂಬರ್ ನೀಡಿ ಪಕ್ಕದ ಬಾಕ್ಸ್ ನಲ್ಲಿ ನೀಡುವ ನಂಬರ್ ಎಂಟರ್ ಮಾಡಬೇಕು. ಹಸಿರು ಬಣ್ಣದ ಸ್ಕ್ರೀನ್ ನಲ್ಲಿ ಮೂಡಿದರೆ ನಿಮ್ಮ ಆಧಾರ್ ಸಕ್ರಿಯವಾಗಿದೆ ಎಂದರ್ಥ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌiನ್‍ಲೋಡ್ ಮಾಡಿಕೊಳ್ಳಿ