Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗುಟ್ಟು ರಟ್ಟು: ಮೋದಿ ಸಿಕ್ರೆಟ್ ವಾರ್ ರೂಮ್‌

ಗುಟ್ಟು ರಟ್ಟು: ಮೋದಿ ಸಿಕ್ರೆಟ್ ವಾರ್ ರೂಮ್‌
ನವದೆಹಲಿ , ಬುಧವಾರ, 28 ಡಿಸೆಂಬರ್ 2016 (11:28 IST)
ನೋಟು ನಿಷೇಧದ ಬಳಿಕ ಪ್ರಧಾನಿ ಮೋದಿ ಕಾಳಧನಿಕರ ವಿರುದ್ಧ ಬಹಿರಂಗ ಹೋರಾಟವನ್ನು ಘೋಷಿಸಿದ್ದಾರೆ. ಪ್ರತಿದಿನ ಆದಾಯ ತೆರಿಗೆ ಇಲಾಖೆ, ಇಡಿ ಮತ್ತು ಸಿಬಿಐ ಅಧಿಕಾರಿಗಳು ಕಪ್ಪುಕುಳಗಳ ನಿವಾಸದ ಮೇಲೆ ದಾಳಿ ಮಾಡಿ ಮೂಟೆಗಟ್ಟಲೆ ಹಣವನ್ನು ವಶಪಡಿಸಿಕೊಳ್ಳುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಇದೆ. ಈ ಕಪ್ಪುಕುಳಗಳ ಬಗ್ಗೆ ಅವರಿಗೆ ಮಾಹಿತಿ ಎಲ್ಲಿಂದ ಸಿಗುತ್ತದೆ ?  ಕಪ್ಪುಹಣದ ವಿರುದ್ಧದ ಹೋರಾಟವನ್ನು ಪ್ರಧಾನಿ ಮೋದಿ ಹೇಗೆ ನಿರ್ವಹಿಸುತ್ತಿದ್ದಾರೆ ಎಂಬ ಕುತೂಹಲ ನಿಮಗಿರಲಿಕ್ಕೆ ಸಾಕು. 
ವಿಶೇಷ ವರದಿಯ ಪ್ರಕಾರ 'ರಹಸ್ಯ ಸಮರ ಕೊಠಡಿ'('secret war room') ಮೂಲಕ ಮೋದಿ ಇದನ್ನು ನಿರ್ವಹಿಸುತ್ತಾರೆ. 
 
ಕಪ್ಪುಹಣ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿ ವಿಶೇಷ ತಂಡವನ್ನು ರಚಿಸಿದ್ದಾರೆ. ಈ ತಂಡದಲ್ಲಿ ನಿರ್ದೇಶಕರ ಮಟ್ಟದ ಅಧಿಕಾರಿಗಳಿದ್ದು ಅವರು ಪ್ರಧಾನಿ ಕಾರ್ಯಾಲಯದ ದೂರವಾಣಿ ಕರೆ ಮತ್ತು ಇ-ಮೇಲ್‌ಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ. ಈ ಕರೆ- ಇ-ಮೇಲ್‌ಗಳನ್ನು ಪರಿಶೀಲಿಸುವ ತಂಡ ಬಳಿಕ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತದೆ. 
 
ಪ್ರಧಾನಿ ಕಾರ್ಯಾಲಯ ಪ್ರತಿನಿತ್ಯ ಕನಿಷ್ಠ 20 ಕರೆಗಳನ್ನು ಸ್ವೀಕರಿಸುತ್ತಿದ್ದು ನವೆಂಬರ್ 8 ರಂದು ನೋಟು ನಿಷೇಧಗೊಳಿಸಿದ ಬಳಿಕ ಇದುವರೆಗೆ ಬಂದ ಕರೆಗಳು 700ಕ್ಕಿಂತ ಹೆಚ್ಚು.
 
ಈ ಹೋರಾಟದಲ್ಲಿನ ಅತಿ ದೊಡ್ಡ ಆಸಕ್ತಿದಾಯಕ ವಿಷಯವೇನೆಂದರೆ ಸಾಮಾನ್ಯ ಜನರೇ ಕಾಳಧನಿಕರ ಬಗ್ಗೆ  ರಹಸ್ಯ ಮಾಹಿತಿಯನ್ನು ನೀಡುತ್ತಿದ್ದಾರಂತೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಸಿಎಂ ಭೇಟಿಗೆ ಸಮಯಾವಕಾಶ ನೀಡಿದ ಪಿಎಂ..