ಪ್ರಧಾನಮಂತ್ರಿ ನರೇಂದ್ರಮೋದಿ ಕಪ್ಪು ಹಣ ಮತ್ತು ಭಯೋತ್ಪಾದನೆ ತಡೆಗೆ ನೋಟ್ ಬ್ಯಾನ್`ನಂತಹ ಕ್ರಾಂತಿಕಾರಕ ನಿರ್ಧಾರ ಕೈಗೊಂಡಿದ್ದರು. ಲಕ್ಷಗಟ್ಟಲೆ ನೋಟುಗಳನ್ನ ಪ್ರಿಂಟ್ ಮಾಡಿ ಹಳೆಯ ನೋಟುಗಳನ್ನ ಜಾಗದಲ್ಲಿ ಚಲಾವಣೆಗೆ ಬಿಟ್ಟಿದ್ದು ದೊಡ್ಡ ಸಾಹಸವೇ ಸರಿ. ಒಟ್ಟೊಟ್ಟಿಗೆ ಅಷ್ಟೊಂದು ನೋಟು ಮುದ್ರಣಕ್ಕೆ ಖರ್ಚಾಗಿದ್ದೆಷ್ಟು..? ಒಟ್ಟು ಲೆಕ್ಕ ಸಿಗದಿದ್ದರೂ ತಲಾ ನೊಟು ಮುದ್ರಣಕ್ಕೆ ಖರ್ಚಾದ ಹಣದ ಲೆಕ್ಕವನ್ನ ಕೇಂದ್ರ ಸರ್ಕಾರ ತೆರೆದಿಟ್ಟಿದೆ
500 ರೂ. ಮುಖಬೆಲೆಯ ನೋಟಿಗೆ ಸರಿ ಸುಮಾರು 2.87 ರೂ.ನಿಂದ 3.09 ರೂ.ನಷ್ಟು ಖರ್ಚಾಗಿದೆ. 2000 ರೂ. ನೋಟು ಮುದ್ರಣಕ್ಕೆ 3.54 ರೂ.ನಿಂದ 3.77 ರೂ.ನಷ್ಟು ಹಣ ಖರ್ಚಾಗಿದೆ. ಹಣಕಾಸು ಇಲಾಖೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಗೆ ಈ ಬಗ್ಗೆ ಲಿಖಿತ ಉತ್ತರ ನೀಡಿದ್ದಾರೆ.
ಹೊಸ ನೋಟುಗಳು ಈಗಲೂ ಮುದ್ರಣವಾಗುತ್ತಿರುವುದರಿಂದ ಸಂಪೂರ್ಣ ವೆಚ್ಚದ ಮಾಹಿತಿ ನೀಡುವುದು ತರಾತುರಿಯಾಗುತ್ತದೆ. ನೋಟುಗಳ ಮುದ್ರಿಸಿ ಜನತೆಯ ಬಳಕೆಗೆ ಒದಗಿಸಲಾಗುತ್ತಿದೆ. ಫೆಬ್ರವರಿ 24ರವರೆಗೆ 11.64 ಲಕ್ಷ ಕೋಟಿ ರೂ. ಚಲಾವಣೆಯಲ್ಲಿದೆ. ನೋಟು ,ಮುದ್ರಣಕ್ಕೆ ರವಾನಿಸುತ್ತಿರುವ ಕಾಗದವನ್ನ ಕಂಪನಿ ಬೇರೆ ಯಾರಿಗೂ ರವಾನಿಸುತ್ತಿಲ್ಲ. ಈ ಬಗ್ಗೆ ಗೌಪ್ಯ ಒಪ್ಪಂದವಾಗಿದೆ ಎಂದು ಅವರು ತಿಳಿಸಿದ್ದಾರೆ.