ನವದೆಹಲಿ: ಪ್ರಧಾನಿಯಾದ ಹೊಸದರಲ್ಲಿ ದೇಶದಲ್ಲಿರುವುದಕ್ಕಿಂತ ವಿದೇಶದಲ್ಲೇ ಇರುತ್ತಾರೆ ಎಂದು ನರೇಂದ್ರ ಮೋದಿ ಬಗ್ಗೆ ಟೀಕೆಗಳು ಕೇಳಿಬರುತ್ತಿತ್ತು. ಇಂತಿಪ್ಪ, ಪ್ರಧಾನಿ ಮೋದಿ ತಮ್ಮ ಅಧಿಕಾರವದಿಯಲ್ಲಿ ಒಟ್ಟು ಎಷ್ಟು ಬಾರಿ ವಿದೇಶ ಯಾತ್ರೆ ಮಾಡಿದ್ದಾರೆ ಗೊತ್ತೇ?
2014 ರಲ್ಲಿ ಲೋಕಸಭೆ ಚುನಾವಣೆ ಗೆದ್ದು ಪ್ರಧಾನಿ ಪಟ್ಟಕ್ಕೇರಿದ ಮೋದಿ ಇದುವರೆಗೆ 56 ಬಾರಿ ವಿದೇಶ ಯಾತ್ರೆ ಕೈಗೊಂಡಿದ್ದಾರೆ. ಮೊದಲ ಬಾರಿಗೆ ಅವರು ಭೇಟಿ ನೀಡಿದ್ದು, ಭೂತಾನ್ ಗೆ. ಅಮೆರಿಕಾಗೆ ನಾಲ್ಕು ಬಾರಿ, ನೇಪಾಳ, ಜಪಾನ್, ಅಫ್ಘಾನಿಸ್ತಾನ, ರಷ್ಯಾ ಮತ್ತು ಚೀನಾಗೆ ಎರಡು ಬಾರಿ ಭೇಟಿ ನೀಡಿದ್ದಾರೆ.
ಈ ವಿಷಯವನ್ನು ವಿದೇಶಾಂಗ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. 2015 ರಲ್ಲಿ ಮೊದಲ ಬಾರಿಗೆ ಭಾರತೀಯ ಪ್ರಧಾನಿಯೊಬ್ಬರು ಮಂಗೋಲಿಯಾಗೆ ಭೇಟಿ ಮಾಡಿದ ದಾಖಲೆಯನ್ನೂ ಮಾಡಿದರು. ಇದಲ್ಲದೆ ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ಯುಎಇ ರಾಷ್ಟ್ರಗಳಿಗೂ ಪ್ರಧಾನಿ ಭೇಟಿಯಿತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ