ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ಕೇಂದ್ರದ ನಿರ್ಧಾರದ ಬಗ್ಗೆ ಸ್ಥಳೀಯರಲ್ಲಿ ಸಂತೋಷದ ವಾತಾವರಣವಿದೆ ಎಂದು ಕೇಂದ್ರ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿಕೊಂಡಿದ್ದಾರೆ.
ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿತ್ತು. ಆದರೆ ಇದರಿಂದ ಸ್ಥಳೀಯರಿಗೆ ಏನಾದರೂ ತೊಂದರೆಯಾಗಿದೆಯೇ? ಅಥವಾ ವಿಶೇಷ ಪ್ರಾತಿನಿಧ್ಯ ರದ್ದಾಗಿರುವುದರಿಂದ ಕಾಶ್ಮೀರಿ ನಿವಾಸಿಗಳಲ್ಲಿ ಅಸಮಾಧಾನ ಮನೆ ಮಾಡಿದೆಯೇ ಎಂಬ ಬಗ್ಗೆ ಅಜಿತ್ ದೋವಲ್ ಪ್ರತಿಕ್ರಿಯಿಸಿದ್ದಾರೆ.
ಇಂತಹ ನಿರ್ಧಾರದಿಂದಾಗಿ ಕಾಶ್ಮೀರಿಗಳಲ್ಲಿ ಹೊಸ ಭರವಸೆ ಮೂಡಿದೆ. ಹೊಸ ಆಶಾಕಿರಣ ಮೂಡಿದೆ ಎಂದು ಅಜಿತ್ ದೋವಲ್ ಹೇಳಿಕೊಂಡಿದ್ದಾರೆ.