ಏಕಕಾಲದಲ್ಲಿ ಎರಡು ಕಾರುಗಳು ಡಿಕ್ಕಿಯಾಗಿ ಎತ್ತರಕ್ಕೆ ಹಾರಿ ಬಿದ್ದರೂ ಮಹಿಳೆಯೋರ್ವಳು ಪವಾದಸದೃಶವಾಗಿ ಬದುಕುಳಿದಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ನೈಋತ್ಯ ದೆಹಲಿಯ ಸಂಗರ್ಪುರಾದಲ್ಲಿ ಹೊಸ ವರ್ಷದಂದು ಹೊಸವರ್ಷದ ದಿನದಂದು ಈ ಘಟನೆ ನಡೆದಿದ್ದು, ಎರಡು ವಾಹನಗಳ ಮಧ್ಯೆ ಸಿಕ್ಕಿ ಬದುಕುಳಿದನ್ನು ಕೇವಲ ಒಂದು ಪದದಲ್ಲಿ ವರ್ಣಿಸುವುದಾದರೆ ಅದನ್ನು 'ಪವಾಡ' ಎನ್ನಬಹುದು.
ಘಟನೆ ವಿವರ: ಕಾಂತಾ ಆನಂದ್ (40) ಎಂಬ 40 ವರ್ಷದ ಮಹಿಳೆ ತಾನು ವಾಸವಾಗಿರುವ ಪಿಂಕ್ ಅಪಾರ್ಟಮೆಂಟ್ ಮುಂದಿನ ರಸ್ತೆಯಲ್ಲಿ ಆಯೋಗಾಗಿ ಕಾಯುತ್ತಿದ್ದಳು. ಈ ಸಂದರ್ಭದಲ್ಲಿ ಅದೇ ಅಪಾರ್ಟಮೆಂಟ್ ನಿವಾಸಿ ಅಶೋಕ್ ಜೋಯಲ್ ಎನ್ನುವವರು ತಮ್ಮ ವ್ಯಾಗನಾರ್ ಕಾರಿನಲ್ಲಿ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಬಿಳಿ ಬಣ್ಣದ ಕಾರೊಂದು ಕಾಂತಾ ಅವರಿಗೆ ಗುದ್ದಿ ಜೋಯಲ್ ಅವರ ಕಾರಿಗೆ ಗುದ್ದಿದೆ.
ಡಿಕ್ಕಿಯ ರಭಸಕ್ಕೆ ಮೇಲೆ ಹಾರಿದ ಕಾಂತಾ ಕೆಳಕ್ಕೆ ಬಿದ್ದು ಪಲ್ಟಿಯಾದ ವ್ಯಾಗನಾರ್ ಕಾರ್ ಕೆಳಗಡೆ ಸಿಕ್ಕಿಹಾಕಿಕೊಂಡಳು.
ಸ್ಥಳಕ್ಕೆ ಓಡಿ ಬಂದ ಜನರು ಆಕೆಯನ್ನು ಹೊರಗೆ ತೆಗೆದು ಆಸ್ಪತ್ರೆ ಸೇರಿಸಿದ್ದಾರೆ. ಕಾಂತಾ ತಲೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು ಬುಧವಾರ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಅಪಘಾತವೆಸಗಿದ ಕಾರ್ ಚಾಲಕ ಅಪ್ರಾಪ್ತನಾಗಿದ್ದು ಘಟನೆ ಬಳಿಕ ಪರಾರಿಯಾಗುತ್ತಿದ್ದ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.