ನವದೆಹಲಿ : ಹಿಂದೂ ಮಹಿಳೆ, ಮುಸ್ಲಿಂ ಪುರುಷನನ್ನು ಮದುವೆಯಾದರೆ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಆದರೆ ಅವರಿಗೆ ಹುಟ್ಟಿದ ಮಕ್ಕಳು ಮಾತ್ರ ಕಾನೂನಿನ ಮಾನ್ಯತೆ ಪಡೆಯುತ್ತಾರೆ ಎಂದು ಸುಪ್ರೀಂಕೋರ್ಟ್ ತೀರ್ಪನ್ನು ಪ್ರಕಟಿಸಿದೆ.
ಮುಸ್ಲಿಂ ಪುರುಷ ಹಾಗೂ ಹಿಂದೂ ಧರ್ಮಕ್ಕೆ ಸೇರಿದ ಆತನ ಎರಡನೇ ಹೆಂಡತಿಗೆ ಹುಟ್ಟಿದ್ದ ವ್ಯಕ್ತಿಯ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.
ಹಿಂದೂಗಳು ಹೂವು ಆಲಂಕರಿಸಿದ ಮೂರ್ತಿ ಪೂಜೆ ಮಾಡುತ್ತಾರೆ. ಮುಸ್ಲಿಂ ಪುರುಷನೊಂದಿಗೆ ಹಿಂದೂ ಮಹಿಳೆ ವಿವಾಹಕ್ಕೆ ಮಾನ್ಯತೆ ಇಲ್ಲ. ಆದರೆ ಅವರಿಗೆ ಹುಟ್ಟಿದ ಮಕ್ಕಳು ಕಾನೂನುಬದ್ಧರಾಗಿದ್ದು, ತಂದೆಯ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ