Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಾಕಿಸ್ತಾನ: ಐಸಿಯುನಲ್ಲಿ ಶವವಾಗಿ ಪತ್ತೆಯಾದ ಹಿಂದೂ ವೈದ್ಯ

ಪಾಕಿಸ್ತಾನ: ಐಸಿಯುನಲ್ಲಿ ಶವವಾಗಿ ಪತ್ತೆಯಾದ ಹಿಂದೂ ವೈದ್ಯ
ಕರಾಚಿ , ಶನಿವಾರ, 30 ಜುಲೈ 2016 (10:15 IST)
32 ವರ್ಷದ ಹಿಂದೂ ಧರ್ಮೀಯ ವೈದ್ಯರೊಬ್ಬರು ತಾವು ಸೇವೆ ಸಲ್ಲಿಸುತ್ತಿದ್ದ ಆಸ್ಪತ್ರೆಯ ತೀವ್ರ ನಿಗಾ ಘಟಕದೊಳಗೆ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.

ಮೃತನನ್ನು ಅನಿಲ್ ಕುಮಾರ್ ಎಂದು ಗುರುತಿಸಲಾಗಿದ್ದು ಶುಕ್ರವಾರ ಮುಂಜಾನೆ ಐಸಿಯು ಒಳಗೆ ಹೋಗಿದ್ದ ಅವರು ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ.  ಸ್ಥಳದಲ್ಲಿ ಸಿರಿಂಜ್ ಪತ್ತೆಯಾಗಿದ್ದು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಯೀಮುದ್ದೀನ್ ತಿಳಿಸಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಿರಿಂಜ್‌ನ್ನು ಸಹ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಈ ವಾರದ ಆರಂಭದಲ್ಲಿ ಹಿಂದೂ ಉದ್ಯಮಿಯನ್ನು ಉದ್ರಿಕ್ತ ಗುಂಪೊಂದು ಹತ್ಯೆ ಮಾಡಿತ್ತು. ಘಟನೆಯಲ್ಲಿ ಆತನ ಹಿಂದೂ ಸ್ನೇಹಿತನಿಗೆ ಗಾಯವಾಗಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಪಾಳಕ್ಕೆ ಬಾರಿಸಿದರೆ ಹಲ್ಲುದುರುತ್ತದೆ: ಅಧಿಕಾರಿಗೆ ಶಾಸಕ