ಚೆನ್ನೈನ ಪೋಯಸ್ ಗಾರ್ಡನ್`ನಲ್ಲಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿವಾಸದ ಮುಂದೆ ಹೈಡ್ರಾಮಾ ನಡೆದಿದೆ.
ಜಯಲಲಿತಾ ಅವರ ವೇದ ನಿಲಯಂ ನಿವಾಸಕ್ಕೆ ಪ್ರವೇಶಿಸಲು ಯತ್ನಿಸಿದ ಜಯಲಲಿತಾ ಅಣ್ನನ ಮಗಳು ದೀಪಾ ಜಯಕುಮಾರ್`ಗೆ ಬಾಗಿಲಲ್ಲೇ ಟಿಟಿವಿ ದಿನಕರನ್ ಬೆಂಬಲಿಗರು ತಡೆಯೊಡ್ಡಿದ್ದಾರೆ. ಕೂಡಲೇ ಪೊಲೀಸ್ ಭದ್ರತೆಯೊಂದಿ ದೀಪಾರನ್ನ ವೇದ ನಿಲಯಂನಿಂದ ಹೊರಗೆ ಕಳುಹಿಸಲಾಗಿದೆ. ಈ ಸಂದರ್ಭ ನಡೆದ ನೂಕು ನುಗ್ಗಲಿನಲ್ಲಿ ಪತ್ರಕರ್ತರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ನನ್ನ ಸಹೋದರ ದೀಪಕ್ ನನ್ನನ್ನ ಇಲ್ಲಿಗೆ ಬರಲು ಹೇಳಿದ್ದ. ಅದಕ್ಕಾಗಿಯೇ ಬಂದೆ. ಆದರೆ,ನನ್ನನ್ನ ಮನೆಗೆ ಪ್ರವೇಶಿಸಲು ಬಿಡಲಿಲ್ಲ. ಶಶಿಕಲಾ ಜೊತೆ ಸೇರಿಕೊಂಡು ನನ್ನ ವಿರುದ್ಧ ಸಂಚು ರೂಪಿಸಿದ್ದಾನೆ. ಹಣಕ್ಕಾಗಿ ಜಯಲಲಿತಾ ಕೊಲೆಗೆ ಸಂಚು ರೂಪಿಸಿದ್ದು ಸಹ ದೀಪಕ್ ಎಂದು ದೀಪಾ ಜಯಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಜಯಲಲಿತಾ ನಿಧನದ ಬಳಿಕ ಪೋಯಸ್ ಗಾರ್ಡನ್ ನಿವಾಸ ಸೇರಿ ಜಯಲಲಿತಾಗೆ ಸೇರಿದ ಎಲ್ಲ ಆಸ್ತಿ ಶಶಿಕಲಾ ಬೆಂಬಲಿಗರ ಸುಪರ್ದಿಯಲ್ಲೇ ಇದೆ. ಶಶಿಕಲಾ ಜೈಲಿಗೆ ಹೋದ ಬಳಿಕ ದಿನಕರನ್ ತನ್ನ ಸಭೆಗಳಿಗೆ ಪೋಯಸ್ ಗಾರ್ಡನ್ ನಿವಾಸ ಬಳಸುತ್ತಿದ್ದಾರೆ. ಚಿಹ್ನೆಗಾಗಿ ಲಂಚ ನೀಡಿದ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ದಿನಕರನ್ ಜೈಲಿಗೆ ಹೋಗಿದ್ದ ಸಂದರ್ಭ ಸೆಕ್ಯೂರಿಟಿ ಮಾತ್ರ ನಿವಾಸದಲ್ಲಿತ್ತು. ಇತ್ತೀಚೆಗೆ, ದಿನಕರನ್ ಜಾಮಿನು ಪಡೆದು ಹೊರಬಂದಿದ್ದರು.