ಬೆಂಗಳೂರು : ಟಿಪ್ಪು ಸುಲ್ತಾನನ ವಿಚಾರ ಕಾಂಗ್ರೆಸ್ ಗೆ ಬಿಸಿ ತುಪ್ಪವಾಗಿದ್ದು, ಈ ಬಗ್ಗೆ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯವಿರುವ ಕಾರಣ ಟಿಪ್ಪು ಬಗ್ಗೆ ಅನಗತ್ಯ ಹೇಳಿಕೆ ನೀಡದಂತೆ ಹೈಕಮಾಂಡ್ ಸೂಚಿಸಿದ್ದಾರೆ ಎನ್ನಲಾಗಿದೆ.
ಕಳೆದ ಎಲೆಕ್ಷನ್ ನಲ್ಲಿ ಟಿಪ್ಪು ಜಯಂತಿ ವಿಚಾರವೇ ‘ಕೈ’ ಗೆ ಮುಳುವಾಗಿತ್ತು. ಈಗ ಮತ್ತೆ ಹಿಂದೂ ವಿರೋಧಿ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆ. ಬಿಜೆಪಿ ಬೇಕೆಂದೇ ಭಾವನಾತ್ಮಕ ವಿಚಾರವನ್ನು ಕೈಗೆತ್ತಿಕೊಳ್ಳುತ್ತಿದೆ, ಬಿಜೆಪಿ ತಂತ್ರಕ್ಕೆ ಪ್ರತಿಕ್ರಿಯೆ ನೀಡಿ ಅವರ ಬಲೆಗೆ ಬೀಳಬಾರದು ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಟಿಪ್ಪು ವಿಚಾರದಿಂದ ಈಗಾಗಲೇ ಅಂತರ ಕಾಯ್ದುಕೊಂಡ ಸಿದ್ದರಾಮಯ್ಯ ಟಿಪ್ಪು ಬಗ್ಗೆ ಆಮೇಲೆ ಮಾತಾಡೋಣ, ಈಗ ನೆರೆಪರಿಹಾರದ ಬಗ್ಗೆ ಚರ್ಚಿಸಿ ಎನ್ನುತ್ತಿದ್ದಾರೆ.