Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 11 ಮಂದಿ ಕಾಮುಕರ ಅಟ್ಟಹಾಸ

ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 11 ಮಂದಿ ಕಾಮುಕರ ಅಟ್ಟಹಾಸ
ರಾಂಚಿ , ಸೋಮವಾರ, 20 ಆಗಸ್ಟ್ 2018 (14:39 IST)
ರಾಂಚಿ : ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 11 ಜನ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಜಾರ್ಖಂಡ್ ನ ಲೋಹರ್ದಾಗಾ ಜಿಲ್ಲೆಯಲ್ಲಿ ಆಗಸ್ಟ್ 16 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


ಆಗಸ್ಟ್ 16 ರಂದು ಇಬ್ಬರು ಬಾಲಕಿಯರು ಪಕ್ಕದ ಮನೆಯ ಮಹಿಳೆ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಹಿರಿ ಹೆರ್ರ ಟೋಪಿ ರೈಲ್ವೇ ಪ್ರದೇಶದಲ್ಲಿ ಬೈಕ್ ಕೆಟ್ಟು ನಿಂತು ಹೋಗಿದೆ. ಈ ವೇಳೆ ಬಾಲಕಿಯೊಬ್ಬಳು ಸ್ನೇಹಿತನಿಗೆ ಕರೆ ಮಾಡಿ ಸಹಾಯ ಮಾಡುವಂತೆ ಕೇಳಿದ್ದಾಳೆ. ಆದರೆ ಸ್ನೇಹಿತ ಬಂದು ಸಹಾಯ ಮಾಡುವ ಬದಲು ಸ್ಥಳಕ್ಕೆ 11 ಮಂದಿಯನ್ನು ಕಳುಹಿಸಿದ್ದಾನೆ.


ಸ್ಥಳಕ್ಕೆ ಬಂದ 11ಮಂದಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಬೆದರಿಸಿ ಅಲ್ಲಿಂದ ಓಡಿಸಿದ್ದಾರೆ. ಬಳಿಕ ಇಬ್ಬರು ಬಾಲಕಿಯರನ್ನು ಪ್ರತ್ಯೇಕ ಸ್ಥಳಕ್ಕೆ ಕರೆದುಕೊಂಡು ಹೋಗಿ ಆ11 ಮಂದಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ  ಅವರ ಬಳಿಯಿದ್ದ ಮೊಬೈಲ್ ಫೋನ್ ಗಳನ್ನು ಸಹ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ.


ಈ ಘಟನೆ ಸಂಬಂಧಿಸಿದಂತೆ ಇಬ್ಬರು ಬಾಲಕಿಯರ ಹೇಳಿಕೆಯ ಆಧಾರದ ಮೇರೆಗೆ ಸರ್ದಾರ್ ಪೊಲೀಸ್ ಠಾಣೆಯಲ್ಲಿ 11 ಮಂದಿ  ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೇ ಬಂಧಿತರಿಂದ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇಹದ ತೂಕ ಇಳಿಸುವುದಕ್ಕಾಗಿ ಈ ಮಹಿಳೆ ಕುಡಿದಿದ್ದು ಏನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಿ!