Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿವಾಹ ಮಂಟಪದಲ್ಲಿ ವರನಿಗೆ ರಿವಾಲ್ವರ್‌ನಿಂದ ಬೆದರಿಸಿ ಅಪಹರಿಸಿದ ಯುವತಿ

ವಿವಾಹ ಮಂಟಪದಲ್ಲಿ ವರನಿಗೆ ರಿವಾಲ್ವರ್‌ನಿಂದ ಬೆದರಿಸಿ ಅಪಹರಿಸಿದ ಯುವತಿ
ಕಾನ್ಪುರ್ , ಬುಧವಾರ, 17 ಮೇ 2017 (19:13 IST)
ಕಲೆ ಜೀವನವನ್ನು ಅನುಕರಿಸುತ್ತದೆ ಎಂದು ಕೆಲವರು ಹೇಳುತ್ತಾರೆ, ಇದರಿಂದಾಗಿ ಬಾಲಿವುಡ್ ಮಸಾಲಾ ಸಿನೆಮಾಗಳಲ್ಲಿ ಮದುವೆ ಮಂಟಪದಿಂದ ವಧುವನ್ನು ವರ ಅಪಹರಿಸುವುದನ್ನು ತೋರಿಸುತ್ತವೆ. 
 
ಆದರೆ, ಇಲ್ಲೊಂದು ವಿಚಿತ್ರ ನಡೆದಿದೆ. ಹಮೀರ್ಪುರ್ ಜಿಲ್ಲೆಯ ಮೌದಾಹಾ ನಗರದಲ್ಲಿನ ಒಂದು ಘಟನೆಯಲ್ಲಿ ಯುವತಿಯೊಬ್ಬಳು ತನ್ನ ಮದುವೆಯಾಗುತ್ತಿದ್ದ ವರವನ್ನು ರಿವಾಲ್ವರ್‌ನಿಂದ ಬೆದರಿಸಿ ಅಪಹರಿಸಿದ್ದಾಳೆ.  
 
ಮಂಗಳವಾರ ನಡೆದ ದಿಗ್ಭ್ರಮೆಗೊಳಿಸುವ ಘಟನೆ ನಗರ ಪ್ರದೇಶವಾದ ಅಗೋಗ್‌ನಲ್ಲಿ ನಡೆದಿದೆ. ಇಲ್ಲಿಯವರೆಗೆ, ಅಪಹರಿಸಿರುವ ವರನ ಇರುವಿಕೆಯ ಬಗ್ಗೆ ಯಾವುದೇ ಸುಳಿವುಗಳು ಪೊಲೀಸರಿಗೆ ಲಭ್ಯವಾಗಿಲ್ಲ. ಯುವತಿ ಮತ್ತು ವರ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿವಾಹವಾದಲ್ಲಿ ಪ್ರಿಯಕರನನ್ನು ಕಳೆದುಕೊಳ್ಳಬಹುದು ಎನ್ನುವ ಆತಂಕದಿಂದ ಯುವತಿ ಇಂತಹ ದಿಟ್ಟ ಹೆಜ್ಜೆಯಿಟ್ಟಿರಬಹುದು ಎನ್ನಲಾಗುತ್ತಿದೆ.   
 
ಯುವತಿಯಿಂದ ಅಪಹರಣಕ್ಕೊಳಗಾದ ವರ ಅಶೋಕ್ ಯಾದವ್ ವೈದ್ಯರೊಬ್ಬರ ಕ್ನಿನಿಕ್‌ನಲ್ಲಿ ಕಂಪೌಂಡರ್ ಉದ್ಯೋಗದಲ್ಲಿದ್ದ. ಯುವತಿ ಕೂಡಾ ಅದೇ ಕ್ಲಿನಿಕ್‌ನಲ್ಲಿದ್ದಳು. ನಂತರ ಪರಸ್ಪರರ ಸ್ನೇಹ ಪ್ರೇಮಕ್ಕೆ ತಿರುಗಿದೆ. 
 
ಆದರೆ, ಪ್ರಿಯಕರ ಅಶೋಕ್ ವಿವಾಹ ಹಮೀರ್ಪುರ್ ಜಿಲ್ಲೆಯ ಭವಾನಿಪುರ್ ಗ್ರಾಮದ ಯುವತಿಯೊಂದಿಗೆ ನಿಶ್ಚಿತಾರ್ಥವಾಗಿದೆ. ನಂತರ ಪ್ರಿಯತಮೆಯ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದ್ದಾನೆ. ಎಸ್‌ಎಂಎಸ್, ವಾಟ್ಸಪ್‌ ಸಂದೇಶಗಳಿಗೂ ಪ್ರತಿಕ್ರಿಯೆ ಕೊಡುವುದನ್ನು ನಿಲ್ಲಿಸಿದ್ದಾನೆ.
 
ಸೋಮವಾರ ಮಧ್ಯರಾತ್ರಿ, ಮದುವೆಯು ದಿಬ್ಬಣ ಮೌದಾಹ ನಗರಕ್ಕೆ ಆಗಮಿಸಿದ ನಂತರ ವಿವಾಹ ಆಚರಣೆಗಳು ಪ್ರಾರಂಭವಾಗಿವೆ.. ಇದರ ಮಧ್ಯೆ, ಯುವತಿಯೊಬ್ಬಳು ಕೆಲವು ಜನರನ್ನು ಕರೆದುಕೊಂಡು ರಿವಾಲ್ವರ್‌ನೊಂದಿಗೆ ಶಸ್ತ್ರಸಜ್ಜಿತಳಾಗಿ ಸ್ಥಳಕ್ಕೆ ಆಗಮಿಸಿದ್ದಾಳೆ. ವರನ ಮುಖಕ್ಕೆ ರಿವಾಲ್ವರ್ ಹಿಡಿದ ಯುವತಿ ನನ್ನೊಂದಿಗೆ ಪ್ರೀತಿಸುತ್ತಿರುವಾಗ ಬೇರೆ ಯುವತಿಯೊಂದಿಗೆ ಯಾಕೆ ಮದುವೆಯಾಗುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 
 
ಪ್ಯಾರ್ ಹಮ್‌ಸೇ ಕಿಯಾ ಔರ್ ಶಾದಿ ಕಿಸಿ ಔರ್ ಸೇ ಕರೋಗೆ? ಯೇ ಹಮ್ ಬರ್ದಾಶ್ ನಹೀ ಕರೆಂಗೇ ಎಂದು ಘೋಷಣೆ ಕೂಗಿದ ಯುವತಿ, ವರ(ಪ್ರಿಯಕರ) ಅಶೋಕ್ ಯಾದವ್ ಕಾಲರ್ ಹಿಡಿದು ತಾನು ತಂದಿದ್ದ ಕಾರಿನತ್ತ ಕರೆದುಕೊಂಡು ಹೋಗಿ ಒತ್ತಾಯಪೂರ್ವಕವಾಗಿ ಕಾರಿನೊಳಗೆ ವರನನ್ನು ನುಗ್ಗಿಸಿ ಪರಾರಿಯಾಗಿದ್ದಾಳೆ.
 
ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಡಿಸಿಪಿ, ಅಪಹರಣದಲ್ಲಿ ಯುವಕ ಮತ್ತು ಯುವತಿಯ ಕೈವಾಡವಿದೆ. ಇದೊಂದು ನಾಟಕೀಯ ತಂತ್ರ ಎಂದು ಹೇಳಿದ್ದಾರೆ.  
 
"ಇಷ್ಟು ಜನರ ಮುಂದೆ ಯುವತಿಯೊಬ್ಳು ವರನನ್ನು ಹೇಗೆ ಅಪಹರಿಸಬಹುದು? ಯಾರೊಬ್ಬರೂ ಅವರನ್ನು ತಡೆಯಲು ಅಥವಾ ವರವನ್ನು ಉಳಿಸಲು ಯಾರೂ ಪ್ರಯತ್ನಿಸಲಿಲ್ಲ ವಾಸ್ತವದಲ್ಲಿ, ಆ ವರ ಸ್ವಇಚ್ಛೆಯಿಂದ ಯುವತಿಯ ಜೊತೆ ಹೋಗಿದ್ದಾನೆ ಎಂದು ತಿಳಿಸಿದ್ದಾರೆ.
 
ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ್ ಯಾದವ್ ಸಹೋದರ ಮತ್ತು ಕೆಲ ಫೋಟೋಗ್ರಾಫರ್‌ಗಳನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕುಲಭೂಷಣ್ ಜಾಧವ್ ಪ್ರಕರಣದ ಬಗ್ಗೆ ನಾಳೆ ತೀರ್ಪು