ಶುಕ್ರವಾರದ ನಮಾಜ್ ಪ್ರಾರ್ಥನೆಯ ಬಳಿಕ ಯುವಕರು ಸೇನಾಯೋಧರ ವಿರುದ್ಧ ಕಲ್ಲು ತೂರಾಟದಲ್ಲಿ ತೊಡಗಿದ್ದರಿಂದ ಭಾರಿ ಪ್ರಮಾಣದಲ್ಲಿ ಹಿಂಸಾಚಾರ ನಡೆದಿರುವುದು ವರದಿಯಾಗಿದೆ.
ಪಾಕಿಸ್ತಾನದ ಧ್ವಜಗಳನ್ನು ಹಿಡಿದ ಯುವಕರು ಸೇನಾ ಯೋಧರ ಮೇಲೆ ಕಲ್ಲು ತೂರಾಟ ನಡೆಸಿದರು. ಯುವಕರನ್ನು ತಡೆಯಲು ಸೇನಾಪಡೆಗಳು ಹರಸಾಹಸ ಪಡಬೇಕಾಯಿತು. ಪ್ರತಿ ಬಾರಿಯೂ ಶುಕ್ರವಾರದ ನಮಾಜ್ ನಂತರ ಯುವಕರು ಕಲ್ಲು ತೂರಾಟದಲ್ಲಿ ತೊಡಗುತ್ತಿರುವುದು ಪೊಲೀಸರಿಗೆ ಮತ್ತು ಸೇನಾಪಡೆಗಳಿಗೆ ತೀವ್ರ ತಲೆನೋವು ತಂದಿದೆ.
ಭಾರತೀಯ ಸೇನಾ ಮುಖ್ಯಸ್ಥ ರಾವತ್ ಪಾಕಿಸ್ತಾನ ಮತ್ತು ಐಎಸ್‌ಐ ಧ್ವಜ ಹಿಡಿದು ಕರ್ತವ್ಯಕ್ಕೆ ಅಡ್ಡಿಪಡಿಸುವವರನ್ನು ಕೂಡಾ ಉಗ್ರರ ಹಿಂಬಾಲಕರು ಎಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಮ್ಮು ಕಾಶ್ಮಿರ ಪ್ರತ್ಯೇಕತಾವಾದಿಗಳಿಗೆ ಎಚ್ಚರಿಕೆ ನೀಡಿದ್ದರು.
ಸೇನಾ ಮುಖ್ಯಸ್ಥ ರಾವತ್ ಹೇಳಿಕೆಗೆ ವಿರೋಧಿಸಿ ಇಂದು ನಮಾಜ್ ಪ್ರಾರ್ಥನೆಯ ನಂತರ ಯುವಕರು ಪಾಕ್ ಧ್ವಜಗಳನ್ನು ಹಿಡಿದು ಕಲ್ಲು ತೂರಾಟ ನಡೆಸಿರಬಹುದು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.