ಪಾಕಿಸ್ತಾನದ ಆಕ್ರಮಿತ ಕಾಶ್ಮಿರದಲ್ಲಿ ನಡೆದ ಸೀಮಿತ ದಾಳಿಯ ವಿಡಿಯೋ ಲಭ್ಯವಿದೆ ಆದರೆ, ಬಿಡುಗಡೆ ಮಾಡೋಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸಭೆಯಲ್ಲಿ ಮಾತನಾಡಿ, ಸೀಮಿತ ದಾಳಿಯ ಬಗ್ಗೆ ಸಚಿವರು ಹೇಳಿಕೆ ನೀಡುವ ಅಗತ್ಯವಿಲ್ಲ. ಸೇನೆ ಕೂಡಾ ಸೀಮಿತ ದಾಳಿಯ ಬಗ್ಗೆ ಬಹಿರಂಗವಾಗಿ ಚರ್ಚಿಸುವುದು ಕೂಡಾ ಸೇನೆಗೆ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.
ಸೀಮಿತ ದಾಳಿಯ ವಿಡಿಯೋ ಬಹಿರಂಗಗೊಳಿಸಿ ಎನ್ನುವ ವಿಪಕ್ಷಗಳ ಒತ್ತಾಯವನ್ನು ತಳ್ಳಿಹಾಕಿದ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು , ಸೀಮಿತ ದಾಳಿಯ ಬಗ್ಗೆ ಮತ್ತಷ್ಟು ಚರ್ಚೆ ಮಾಡುವುದು ಸೇನೆಗೆ ಅಪಮಾನ ಮಾಡಿದಂತೆ. ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ತಪ್ಪು ಒಪ್ಪಿಕೊಂಡು ಸರಕಾರವನ್ನು ಬೆಂಬಲಿಸಿದೆ ಎಂದು ಹೇಳಿದ್ದಾರೆ.
ಭಾರತೀಯ ಸೇನೆಯ ಡಿಜಿಎಂಓ ರಣಬೀರ್ ಸಿಂಗ್, ಸೀಮಿತ ದಾಳಿಯ ವಿಡಿಯೋವನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ತೋರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸೀಮಿತ ದಾಳಿಯ ವಿಡಿಯೋ ವೀಕ್ಷಿಸಿದ ನಂತರ ರಕ್ಷಣಾ ಸಚಿವ ಪರಿಕ್ಕರ್, ಪ್ರಧಾನಿ ಮೋದಿಯೊಂದಿಗೆ ಮಾತನಾಡಿ, ವಿಡಿಯೋದ ಬಗ್ಗೆ ತೃಪ್ತಿ ಹೊಂದಿದ್ದು, ಸಾರ್ವಜನಿಕವಾಗಿ ಬಿಡುಗಡೆಗೊಳಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ