ನವದೆಹಲಿ: ಇತ್ತೀಚೆಗೆ ಕ್ರೀಡಾ ಪಟುಗಳು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಸರ್ಕಾರಕ್ಕೆ ನೀಡಬೇಕು ಎಂದು ಆದೇಶಿಸಿ ವಿವಾದಕ್ಕೀಡಾದ ಹರ್ಯಾಣ ರಾಜ್ಯ ಸರ್ಕಾರ ಮತ್ತೊಂದು ವಿವಾದಿತ ಹುಕುಂ ಹೊರಡಿಸಿದೆ.
ಹರ್ಯಾಣದ ಎಲ್ಲಾ ಸರ್ಕಾರಿ ಅಧಿಕಾರಿಗಳು ಇನ್ನು ಮುಂದೆ ಯಾವುದೇ ಸಂಸದ, ಶಾಸಕರು ಎದುರಾದಾಗ ಎದ್ದು ನಿಂತು ಗೌರವ ಸಲ್ಲಿಸಬೇಕು. ಜನಪ್ರತಿನಿಧಿಗಳು ಆದೇಶಿಸುವವರೆಗೆ ಅವರು ನಿಂತುಕೊಂಡೇ ಸಂವಹನ ನಡೆಸಬೇಕು ಎಂದು ವಿವಾದಿತ ಸುತ್ತೋಲೆ ಹೊರಡಿಸಿದೆ.
ಹರ್ಯಾಣ ಮುಖ್ಯ ಕಾರ್ಯದರ್ಶಿಗಳ ಕಚೇರಿಯಿಂದಲೇ ಈ ಆದೇಶ ಹೊರಬಿದ್ದಿದೆ. ಈ ಸುತ್ತೋಲೆಯೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಬಿಜೆಪಿ ಹರ್ಯಾಣದಲ್ಲಿ ಒಂದು, ದೆಹಲಿಗೆ ಒಂದು ನೀತಿ ಅನುಸರಿಸುತ್ತಿದೆ ಎಂದು ಟೀಕಿಸಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.