Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ ದರೋಡೆ: 10 ಕೋಟಿ ರೂ. ಮೌಲ್ಯದ ಬಂಗಾರ ಲೂಟಿ

ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ ದರೋಡೆ: 10 ಕೋಟಿ ರೂ. ಮೌಲ್ಯದ ಬಂಗಾರ ಲೂಟಿ
haryana , ಶುಕ್ರವಾರ, 10 ಫೆಬ್ರವರಿ 2017 (09:14 IST)
ಹರ್ಯಾಣದ ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ ದರೋಡೆ ನಡೆದಿದೆ. ಸುಮಾರು 10 ಕೋಟಿ ರೂ. ಮೌಲ್ಯದ 33 ಕೆ.ಜಿ ಬಂಗಾರ ದೋಚಲಾಗಿದೆ.
ಸಾಂದರ್ಭಿಕ ಚಿತ್ರ


ನಿನ್ನೆ ರಾತ್ರಿ ಕಚೇರಿಗೆ ನುಗ್ಗಿದ 7ರಿಂದ 8ಮಂದಿ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಮತ್ತು ಹಣ ದೋಚಿದ್ದಾರೆ. ಕಳೆದ 6 ತಿಂಗಳಲ್ಲಿ ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ  ನಡೆದ 6ನೇ ದರೋಡೆ ಇದಾಗಿದೆ. ಮುಂಬೈ ಮತ್ತು ದೆಹಲಿ ಸುತ್ತಮುತ್ತ ಮಣಪ್ಪುರಂ ಕಚೇರಿಗಳನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ದೇಶದ 25 ನಗರಗಳಲ್ಲಿ ಮಣಪ್ಪುರಂ ಫೈನಾನ್ಸ್ 3500 ಶಾಕಾ ಕಚೇರಿಗಳನ್ನ ಹೊಂದಿದೆ. ಜನವರಿಯಲ್ಲಿ ಛತ್ತೀಸ್ ಗಢ ಮತ್ತು ಕಳೆದ ವರ್ಷ ಕೋಲ್ಕತ್ತಾ, ನಾಗ್ಪುರ್, ಜಲಂದರ್ ಸೇರಿ 6 ಶಾಖಾ ಕಚೇರಿಗಳಲ್ಲಿ ಲೂಟಿ ನಡೆದಿತ್ತು.  40 ಕೋಟಿ ಮೌಲ್ಯದ 150 ಕೆಜಿ ಬಂಗಾರ ದೋಚಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ರಾಜಕೀಯದಲ್ಲಿ ಈಗ ಗವರ್ನರ್ ಆಟ!