ಬೆಂಗಳೂರು: 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದಿನಿಂದ ಎರಡು ದಿನಗಳ ಕಾಲ ಮನೆ ಮನೆಗಳಲ್ಲಿ ಧ್ವಜ ಹಾರಿಸುವ ಕಾರ್ಯಕ್ರಮ ನಡೆಯಲಿದೆ.
ಕೇಂದ್ರ ಸರ್ಕಾರ ಕರೆ ನೀಡಿರುವ ಹರ್ ಘರ್ ತಿರಂಗಾ ಯೋಜನೆ ಇಂದಿನಿಂದ ಆರಂಭವಾಗಲಿದೆ. ಆಗಸ್ಟ್ 13 ರಿಂದ 15 ರವರೆಗೆ ನಿಮ್ಮ ನಿಮ್ಮ ಮನೆಗಳಲ್ಲಿ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಸರ್ಕಾರ ಕರೆ ನೀಡಿದೆ.
ಅದರಂತೆ ಇಂದು ಧ್ವಜಾರೋಹಣ ಮಾಡಿ ಆಗಸ್ಟ್ 15 ರಂದು ಧ್ವಜ ಅವರೋಹಣ ಮಾಡಬಹುದು. ಆದರೆ ನೆನಪಿಡಿ, ರಾಷ್ಟ್ರಧ್ವಜ ಖರೀದಿ ಮಾಡುವಾಗ ಪ್ಲಾಸ್ಟಿಕ್ ಧ್ವಜ ತಂದು ಅಪಮಾನ ಮತ್ತು ಪರಿಸರಕ್ಕೆ ಹಾನಿ ಮಾಡಬೇಡಿ. ಬಟ್ಟೆಯ ಧ್ವಜ ತಂದು ತಕ್ಕ ಗೌರವಗಳೊಂದಿಗೆ ಧ್ವಜಾರೋಹಣ ಮಾಡಿ. ಕೆಳಗಿಳಿಸಿದ ಮೇಲೆ ಅದನ್ನು ನಿಯಮಾನುಸಾರವೇ ಮಡಿಚಿ ರಾಷ್ಟ್ರಧ್ವಜಕ್ಕೆ ಗೌರವ ನೀಡಿ.