ಬೆಂಗಳೂರು: ಗುಜರಾತ್ ನಲ್ಲಿ ರಾಜ್ಯ ಸಭೆ ಚುನಾವಣೆ ನಡೆಯುವವರೆಗೂ ಅಲ್ಲಿನ ಶಾಸಕರಿಗೆ ಬೆಂಗಳೂರೇ ನೆಲೆಯಾಗಲಿದೆಯಂತೆ. ಗುಜರಾತ್ ನಲ್ಲಿ ಬಿಜೆಪಿ ಕಾಂಗ್ರೆಸ್ ಶಾಸಕರಿಗೆ 15 ಕೋಟಿ ರೂ. ಮತ್ತು ಕುಟುಂಬದವರಿಗೆ ಜೀವ ಬೆದರಿಕೆ ಹಾಕಿ ಕೈ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನಗರದ ಹೊರವಲಯಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿರುವ ಶಾಸಕರು ಫೋನ್ ಸಂಪರ್ಕಗಳನ್ನು ಕಡಿತಗೊಳಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ನ ಎಲ್ಲಾ 53 ಅಭ್ಯರ್ಥಿಗಳಿಗೆ ಪಕ್ಷದ ಪರ ಮತದಾನ ಮಾಡುವಂತೆ ವಿಪ್ ಜಾರಿ ಮಾಡಲಾಗಿದೆಯಂತೆ. ಅಲ್ಲಿ ಚುನಾವಣೆ ಮುಗಿಯುವವರೆಗೂ ಶಾಸಕರು ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಈ ನಡುವೆ ಗುಜರಾತ್ ನಲ್ಲಿ ಪ್ರವಾಹ ಪರಿಸ್ಥಿತಿಯಿರುವಾಗ ಶಾಸಕರು ಬೆಂಗಳೂರಿನಲ್ಲಿ ಮೋಜು ಮಸ್ತಿ ಮಾಡುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ನ ಶಾಸಕರು ಯಾರೂ ಪ್ರವಾಸ ಪೀಡಿತ ಸ್ಥಳಕ್ಕೆ ಭೇಟಿ ನೀಡುವುದಾಗಲಿ, ಜನರಿಗೆ ಸಾಂತ್ವನ ಹೇಳುವುದಾಗಲೀ ಮಾಡದೇ ಇರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ