Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜ್ಯಸಭಾ ಚುನಾವಣೆ: ಶಾಸಕರಿಗೆ ಭದ್ರತೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚನೆ

ರಾಜ್ಯಸಭಾ ಚುನಾವಣೆ: ಶಾಸಕರಿಗೆ ಭದ್ರತೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚನೆ
ಅಹ್ಮದಾಬಾದ್ , ಭಾನುವಾರ, 30 ಜುಲೈ 2017 (10:53 IST)
ಅಹ್ಮದಾಬಾದ್:ರಾಜ್ಯಸಭಾ ಚುನಾವಣೆ ಹಿನ್ನಲೆಯಲ್ಲಿ ಗುಜರಾತ್ ನಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರ ಸ್ವರೂಪ ಪಡೆದುಕೊಂಡ ಹಿನ್ನಲೆಯಲ್ಲಿ ಶಾಸಕರಿಗೆ ಹಾಗೂ ಅವರ ಕುಟುಂಬಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಚುನಾವಣಾ ಆಯೋಗ ಗುಜರಾತ್ ಸರ್ಕಾರಕ್ಕೆ ಸೂಚಿಸಿದೆ.
 
ಗುಜರಾತ್ ಕಾಂಗ್ರೆಸ್ ಘಟಕಕ್ಕೆಆಪರಷೇನ್ ಕಮಲದ ಭೀತಿ ಆರಂಭವಾಗಿದ್ದು, ತನ್ನೆಲ್ಲಾ ಶಾಸಕರನ್ನು ಬೆಂಗಳೂರಿಗೆ ರವಾನೆ ಮಾಡಿದೆ. ಬೆಂಗಳೂರಿನ ರಾಮನಗರದಲ್ಲಿರುವ ಈಗಲ್ಟನ್ ರೆಸಾರ್ಟ್ ನಲ್ಲಿ ಶಾಸಕರನ್ನು ಇರಿಸಲಾಗಿದೆ.  ಈ ಮಧ್ಯೆ ತಮ್ಮ ಶಾಸಕರಿಗೆ ರಕ್ಷಣೆ ಇಲ್ಲ. ಆಮಿಷಗಳನ್ನು, ಬೆದರಿಕೆ ಒಡ್ಡಿ  ಅವರನ್ನು ಪಕ್ಷದಿಂದ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗುಜರಾತ್ ಕಾಂಗ್ರೆಸ್ ಘಟಕದ ಮುಖಂಡರು ಆಯೋಗಕ್ಕೆ ಮನವಿ ಮಾಡಿದ್ದಾರೆ.
 
ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಗುಜರಾತ್ ಸರ್ಕಾರಕ್ಕೆ ಶಾಸಕರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಸೂಕ್ತ ಭದ್ರತೆ ನೀಡುವಂತೆ ಸೂಚನೆ ನೀಡಿದೆ. ಅಂತೆಯೇ ಗುಜರಾತ್ ನಲ್ಲಿ ಚುನಾವಣಾ  ಆಯೋಗದಿಂದ ವಿಚಕ್ಷಣ ದಳವನ್ನು ರಚನೆ ಮಾಡಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ಲೀಲ ಸಂದೇಶ ಹಾಕಿದ ಪ್ರಾಧ್ಯಾಪಕನ ಮಾನ ಹರಾಜು ಹಾಕಿದ ವಿದ್ಯಾರ್ಥಿನಿ