ಗುಜರಾಜ್ ನ ವಡ್ಗಾಮ್ ಶಾಸಕ ಜಿಗ್ನೇಶ್ ಮೆವಾನಿ ಸೇರಿದಂತೆ ೧೨ ಮಂದಿಗೆ ೩ ತಿಂಗಳು ಜೈಲು ಶಿಕ್ಷೆ ವಿಧಿಸಿ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.
ಜುಲೈ 2017 ರಲ್ಲಿ ಮೆಹ್ಸಾನಾ ಪಟ್ಟಣದಿಂದ ಪೊಲೀಸ್ ಅನುಮತಿಯಿಲ್ಲದೆ ರ್ಯಾಲಿ ಆಯೋಜಿಸಿದ್ದಕ್ಕಾಗಿ ಜಿಗ್ನೇಶ್ ಮೆವಾನಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಾಯಕಿ ರೇಷ್ಮಾ ಪಟೇಲ್ ಸೇರಿದಂತೆ ೧೨ ಮಂದಿಯಗೆ ಜೈಲು ಶಿಕ್ಷೆ ವಿಧಿಸಿ ಮೆಹ್ಸಾನಾದ ಮ್ಯಾಜಿಸ್ಟ್ರಿಟ್ ನ್ಯಾಯಾಲಯ ಗುರುವಾರ ದೋಷಿ ಎಂದು ತೀರ್ಪು ನೀಡಿದೆ.
ಮೆವಾನಿ ಸೇರಿದಂತೆ ಎಲ್ಲಾ ೧೨ ಮಂದಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ತಲಾ 1,000 ರೂ. ದಂಡ ವಿಧಿಸಲಾಗಿದೆ.
ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಜೆ ಎ ಪರ್ಮಾರ್ ನೇತೃತ್ವದ ಪೀಠ, "ರ್ಯಾಲಿ ನಡೆಸುವುದು ಅಪರಾಧವಲ್ಲ ಆದರೆ ಅನುಮತಿಯಿಲ್ಲದೆ ರ್ಯಾಲಿ ನಡೆಸುವುದು ಅಪರಾಧ". "ಅವಿಧೇಯತೆಯನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.
ಉನಾದಲ್ಲಿ ಕೆಲವು ದಲಿತರ ಮೇಲೆ ನಡೆದ ಹಲ್ಲೆಯ ಖಂಡಿಸಿ ಜುಲೈ 12, 2017 ರಂದು ದೊಡ್ಡ ಪ್ರಮಾಣದ ಆಂದೋಲನ ಮಾಡಿದ್ದರು. ಮೇವಾನಿ ಮತ್ತು ಅವರ ಸಹಚರರು ಮೆಹ್ಸಾನಾದಿಂದ ನೆರೆಯ ಬನಸ್ಕಾಂತದ ಧನೇರಾಗೆ 'ಆಜಾದಿ ಕೂಚ್' ಅನ್ನು ನಡೆಸಿದರು.
ಮೇವಾನಿ ಅವರ ಸಹಚರರಲ್ಲಿ ಒಬ್ಬರಾದ ಕೌಶಿಕ್ ಪರ್ಮಾರ್ ಅವರು ಸ್ಥಾಪಿಸಿದ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ ಎಂಬ ಸಂಘಟನೆಯ ಬ್ಯಾನರ್ ಅಡಿಯಲ್ಲಿ ರ್ಯಾಲಿಗೆ ಮೆಹ್ಸಾನಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ನಲ್ಲಿ ಅನುಮತಿ ಕೋರಿದ್ದರು. ಆರಂಭದಲ್ಲಿ ನೀಡಲಾಗಿದ್ದರೂ ಬಳಿಕ ಅದನ್ನು ಅಧಿಕಾರಿಗಳು ಹಿಂಪಡೆದಿದ್ದರು ಆದರೂ ಆಯೋಜಕರು ರ್ಯಾಲಿ ನಡೆಸಿದರು.