ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗುರುವಾರ ಸಹಿ ಹಾಕಿದ್ದಾರೆ.
ಆಗಸ್ಟ್ ತಿಂಗಳಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿತ್ತು.
ಆದರೆ ಇದು ಸಾಂವಿಧಾನಿಕ ತಿದ್ದಪಡಿಯಾಗಿದ್ದರಿಂದ ರಾಜ್ಯಗಳ ಅನುಮೋದನೆ ಸಹ ಅಗತ್ಯವಾಗಿತ್ತು. ರಾಜ್ಯಗಳ ಒಪ್ಪಿಗೆಗೆ ಕಳುಹಿಸಲಾಗಿದ್ದ ಮಸೂದೆ ಗಡುವಿಗೆ ಮೊದಲೇ 50 ಪ್ರತಿಶತ ವಿಧಾನಸಭೆಗಳ ಅನುಮೋದನೆ ಪಡೆಯಲು ಯಶ ಕಂಡಿತ್ತು. ಹಾಗಾಗಿ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತ ಪಡೆಯಲು ಕಳುಹಿಸಲಾಗಿತ್ತು.
30 ದಿನಗಳೊಳಗೆ ಅಗತ್ಯ ಸಂಖ್ಯೆಯ ರಾಜ್ಯಗಳ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರ ಗಡುವು ನಿಗದಿ ಮಾಡಿತ್ತು. ಈ ಗಡುವು ಸೆಪ್ಟೆಂಬರ್ 6ಕ್ಕೆ ಕೊನೆಗೊಂಡಿದೆ. 31 ರಾಜ್ಯಗಳ ಪೈಕಿ 16 ರಾಜ್ಯಗಳು ಈಗಾಗಲೇ ಮಸೂದೆಗೆ ಒಪ್ಪಿಗೆ ಹಾಕಿವೆ.
ಮಸೂದೆಯನ್ನು 2017 ಎಪ್ರಿಲ್ 1 ರಿಂದ ಜಾರಿಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ