Webdunia - Bharat's app for daily news and videos

Install App

ಲೋಕಸಭೆಯಲ್ಲಿ ಜಿಎಸ್ ಟಿ ಮಸೂದೆಗಳ ಅಂಗೀಕಾರ

Webdunia
ಗುರುವಾರ, 30 ಮಾರ್ಚ್ 2017 (08:41 IST)
ದೇಶಾದ್ಯಂತ ಏಕರೂಪ ಸರಕು ಮತ್ತು ಸೇವಾ ತೆರಿಗೆ ವಿಧಿಸುವ ಮಹತ್ವದ ಜಿಎಸ್`ಟಿ ಮಸೂದೆಗೆ ಲೋಕಸಭೆ ಅಂಗೀಕರಿಸಿದೆ. 7 ಗಂಟೆಯ ಸತತ ಚರ್ಚೆ ಬಳಿಕ ಧ್ವನಿಮತದ 4 ಮಸೂದೆಗಳನ್ನ ಅಂಗೀಕರಿಸಲಾಗಿದೆ.

. ಲೋಕಸಭೆಯಲ್ಲಿ ಜಿಎಸ್ಟಿ ಅಂಗೀಕಾರ ಸಿಗುತ್ತಿದ್ದಂತೆ ಟ್ವಿಟ್ ಮಾಡಿರುವ ಅರುಣ್ ಜೇಟ್ಲಿ, ದೇಶದ ಎಲ್ಲ ಜನತೆಗೆ ಶುಭಾಶಯ ತಿಳಿಸಿದ್ದಾರೆ. ಹೊಸವರ್ಷ, ಹೊಸ ಕಾನೂನು, ಹೊಸ ಭಾರತ ಎಂದು ಹೇಳಿದ್ದಾರೆ.

ಕೇಂದ್ರ ಸರಕು ಮತ್ತು ಸೇವಾ ತೆರಿಗೆ-2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-2017, ಜಿಎಸ್`ಟಿ ಮಸೂದೆ(ರಾಜ್ಯಗಳಿಗೆ ಪರಿಹಾರ ಒದಗಿಸುವ)-2017 ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕು ಮತ್ತು ಸೇವಾ ಯತೆರಿಗೆ ಮಸೂದೆಯನ್ನ ಅಂಗೀಕರಿಸಲಾಗಿದೆ.

ಈ ಹೊಸ ಮಸೂದೆ ದೇಶಾದ್ಯಂತ ಸರಕು ಮತ್ತು ಸೇವೆಗಳ ಮೇಲೆ ಏಕರೂಪ ಪರೋಕ್ಷ ತೆರಿಗೆಗೆ ಅನುವುಮಾಡಿಕೊಂಡಲಿದ್ದು, ಸರಕುಗಳ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ತಿಳಿಸಿದ್ದಾರೆ. ಜುಲೈ 1ಕ್ಕೆ ಜಿಎಸ್`ಟಿ ಮಸೂದೆ ಜಾರಿಗೆ ಉದ್ದೇಶಿಸಿರುವ ಕೇಂದ್ರ ಸರ್ಕಾರಕ್ಕೆ ಲೋಕಸಭೆಯಲ್ಲಿ ಅಂಗೀಕಾರ ಪ್ರಕ್ರಿಯೆಗೆ ವೇಗ ನೀಡಿದೆ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments