ದೇಶಾದ್ಯಂತ ಏಕರೂಪ ಸರಕು ಮತ್ತು ಸೇವಾ ತೆರಿಗೆ ವಿಧಿಸುವ ಮಹತ್ವದ ಜಿಎಸ್`ಟಿ ಮಸೂದೆಗೆ ಲೋಕಸಭೆ ಅಂಗೀಕರಿಸಿದೆ. 7 ಗಂಟೆಯ ಸತತ ಚರ್ಚೆ ಬಳಿಕ ಧ್ವನಿಮತದ 4 ಮಸೂದೆಗಳನ್ನ ಅಂಗೀಕರಿಸಲಾಗಿದೆ.
. ಲೋಕಸಭೆಯಲ್ಲಿ ಜಿಎಸ್ಟಿ ಅಂಗೀಕಾರ ಸಿಗುತ್ತಿದ್ದಂತೆ ಟ್ವಿಟ್ ಮಾಡಿರುವ ಅರುಣ್ ಜೇಟ್ಲಿ, ದೇಶದ ಎಲ್ಲ ಜನತೆಗೆ ಶುಭಾಶಯ ತಿಳಿಸಿದ್ದಾರೆ. ಹೊಸವರ್ಷ, ಹೊಸ ಕಾನೂನು, ಹೊಸ ಭಾರತ ಎಂದು ಹೇಳಿದ್ದಾರೆ.
ಕೇಂದ್ರ ಸರಕು ಮತ್ತು ಸೇವಾ ತೆರಿಗೆ-2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-2017, ಜಿಎಸ್`ಟಿ ಮಸೂದೆ(ರಾಜ್ಯಗಳಿಗೆ ಪರಿಹಾರ ಒದಗಿಸುವ)-2017 ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕು ಮತ್ತು ಸೇವಾ ಯತೆರಿಗೆ ಮಸೂದೆಯನ್ನ ಅಂಗೀಕರಿಸಲಾಗಿದೆ.
ಈ ಹೊಸ ಮಸೂದೆ ದೇಶಾದ್ಯಂತ ಸರಕು ಮತ್ತು ಸೇವೆಗಳ ಮೇಲೆ ಏಕರೂಪ ಪರೋಕ್ಷ ತೆರಿಗೆಗೆ ಅನುವುಮಾಡಿಕೊಂಡಲಿದ್ದು, ಸರಕುಗಳ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ತಿಳಿಸಿದ್ದಾರೆ. ಜುಲೈ 1ಕ್ಕೆ ಜಿಎಸ್`ಟಿ ಮಸೂದೆ ಜಾರಿಗೆ ಉದ್ದೇಶಿಸಿರುವ ಕೇಂದ್ರ ಸರ್ಕಾರಕ್ಕೆ ಲೋಕಸಭೆಯಲ್ಲಿ ಅಂಗೀಕಾರ ಪ್ರಕ್ರಿಯೆಗೆ ವೇಗ ನೀಡಿದೆ.